ಮಂಗಳವಾರ, ಫೆಬ್ರವರಿ 14, 2017

ಕಳ್ಳ ಹುಡುಗಿಯರ ಪಾಲಾಗಬಾರದೆಂದು ಕೊಡುತ್ತಿದ್ದೆನ್ನಷ್ಟೆ..!!

ಪ್ರೀಯ ಗೆಳತಿ
ನಿನ್ನಿಂದ ತುಸು
ದೂರ ಇರುವಂತೆ ನಟಿಸುತ್ತಿದ್ದ
ನಾನು ;
ಕೊನೆಯವರೆಗೂ
ನನ್ನ ಮನಸಿನಲ್ಲಿರುವ
ಭಾವನೆಗಳನ್ನು ನಿನ್ನ ಮುಂದೆ
ಹೇಳಿಕೊಳ್ಳಲು ಆಗಲೆ ಇಲ್ಲ..!!

.
ಎಷ್ಟೋ ಸಾರಿ
ನಿನ್ನ ಮುಂದೆ
ನಾ ಬಂದು ನಿಂತಾಗ
ನನ್ನೆದೆಯ ಪಿಸು ಮಾತುಗಳನ್ನು
ಮೈಯೆಲ್ಲ ಕಿವಿಯಾಗಿಸಿ
 ಕೇಳಿಸಿಕೊಂಡಿದ್ದಿಯಾ..!!
ಆದರೆ
ನೀನು ಕೇಳಿಸಿಕೊಂಡಿದಿಯಾ
ಅಂತಾ ನಾ ನನ್ನದೆಯ
ಭಾವನೆಗಳನ್ನು ಹೇಳದೆ
ಮೂರ್ಖನಾದೆ..!!

ನಿನ್ನಲ್ಲಿ
ಪ್ರೀತಿ ಇಲ್ಲ ಎಂದು
ನನ್ನದೆಯ ಪ್ರೀತಿಯನ್ನೆಲ್ಲ
ನಿನಗೆ ಕೊಡುತ್ತಿಲ್ಲ ಗೇಳತಿ..!!
ನನ್ನ ಪ್ರೀತಿ
ಕಳ್ಳ ಹುಡುಗಿಯರ
ಪಾಲಾಗಬಾರದೆಂದು
ಕೊಡುತ್ತಿದ್ದೆನ್ನಷ್ಟೆ..!!

ನಾಳೆ
ಪೆಬ್ರುವರಿ ಹದಿನಾಲ್ಕು
ನಲ್ಲೆ
ಸಹಿ ಹಾಕು
ನಮ್ಮ ಪ್ರೀತಿಗೆ;
ನಮ್ಮ ಬದುಕಿಗೂ ಸಿಗಲಿ
ಒಂದು ಬ್ರೇಕ್ಕು..!!

ಸೋಮವಾರ, ಫೆಬ್ರವರಿ 13, 2017

ಹೃದಯವೆಂಬ ಪ್ರೀತಿಗೆ ಯಾವದು ಸಾಟಿಯಾಗದು..!!

ಆ ಪುಟ್ಟ ಹೃದಯ
ಆವಾಗಿನಿಂದಲೂ 
ಬಡೆಯುತ್ತಿದ್ದರೂ ತೆಗೆಯಲಿಲ್ಲ
ಎದೆಯ ಬಾಗಿಲು.!!
ಆದರೆ ಈಗ
ಇವರು ಬಡೆಯುತ್ತಿದ್ದಾರೆ..!!
ಪಾಪ ಆ..ಹೃದಯ
ತಣ್ಣಗೆ ಮಲಗಿಕೊಂಡಿದೆ
ನೋಡುತ್ತ ಮುಗಿಲು..!!

ಶನಿವಾರ, ಜನವರಿ 31, 2015

ನಿನ್ನ ನೆನಪ ಸಂಭ್ರಮದಲ್ಲಿಯ ಪ್ರೀತಿ ಹಸಿರಾಗಲಿ

``1``
ಖುದ್ದು
ಅವಳ ನೆನಪಿನ ಕೀರು
ಬೇರಳನ್ನೇ ಹಿಡಿದು
 ಹೊರಟ
ನನ್ನ ದೊಡ್ಡ
ಮನಸಿಗೆ;
ಕಣ್ಣ್ ರೆಪ್ಪೇಗಳ ಅಂಚಲ್ಲಿ
ಜೋಕಾಲಿ ಆಡುತ್ತಿರುವ
ಸಣ್ಣ ಹನಿಗಳ
ಖುಷಿಯಿರಲಿಲ್ಲ..!!

``2``
ಹೆಜ್ಜೆ ಹೆಜ್ಜೆಗೂ
ಮುತ್ತಿಕೊಳ್ಳುವ ನೆನಪುಗಳ
ಗಲಾಟೆಯೋಳಗೆ
ಆವ ಕೊಟ್ಟ ಕಾಲ್ಗೇಜ್ಜೆ
ಜಾರಿ ಹೋಗದಿರಲಿ ದೇವರೆ...!!!

ಗುರುವಾರ, ಡಿಸೆಂಬರ್ 5, 2013

ಸಾಲು ಹನಿಗಳಲ್ಲಿ ಸಾವಿರ ಕನಸು..!!

 ``1``
ನೀನು
ಕಣ್ಣಿಗೆ ಬಿದ್ದ ಮೇಲೆ
ಹುಡುಗಿ;
ಇಡಿ ಜಗತ್ತು ಅಸ್ಪಷ್ಟವಾಗಿ
ನಿನ್ನ ಬಿಟ್ಟು ಬೇರೆನು
ಕಾಣಲೇ
ಇಲ್ಲ..!!
.
 ``2``
 ತುಟಿ ತೊಂಡೆ
ಬೇರಳು ಬೆಂಡೆ
ನಾನಂದು ಕೊಂಡೆ
ಹೀಗೆ ವರ್ಣಿಸಿದವ ಕಲ್ಲು ಬಂಡೆ
ಯಾಕೆಂದರೆ ಪ್ರತಿ ದಿನಾನು
ಅಲ್ಲ ಸಂಡೆ..!!
ನಿಜ ಹೆಳಬೇಕೆಂದರೆ
ನೀನು ಅಷ್ಟೆನೂ
ಸುಂದರಿ ಅಲ್ಲಾ
ಹಾಗೆಂದು ವರ್ಣಿಸಿದರೆ
ಅದು ಪ್ರಾಮಾಣಿಕವಲ್ಲ..!!
  ``3``
ಕಡಲ ದಡದ ಮೇಲೆ
ಬರೆದ ನಿನ್ನ ಹೆಸರ
ಅಳಿಸಿ ಹೊದ ಆ..ಅಲೆಗಳು
ಮರಳಿ ಬಂದು ಸಾರಿ ಕೇಳುವಷ್ಟರಲ್ಲಿ..!!
ದುಃಖಗೊಂಡ ಕಣ್ಣ ಹನಿಗಳು
ಆತ್ಮ ಹತ್ಯೆ ಮಾಡಿಕೊಂಡಿದ್ದವು..!!
``4``
 ನನ್ನ ಹೃದಯವೇನು
ಕತ್ತಲೆಯ ಗೂಡಲ್ಲ..!!
ಅದು ಬೇಳಕಿನ ಮಗ್ಗಲು
ಆದರೂ
ನನಗೆ ಗೋತ್ತಾಗದ ಹಾಗೆ
ನೀನು ಅದರೋಳಗೆ ನುಸುಳಿದ್ದು
ನನಗಷ್ಟೆ ಅಲ್ಲ
ವಿಜ್ಞಾನಕ್ಕೂ ಸವಾಲು...!!

ಮಂಗಳವಾರ, ನವೆಂಬರ್ 26, 2013

ನಾಲ್ಕು ಸಾಲಿನ ಹನಿಗಳಲ್ಲಿ ನಿನ್ನ ಕಟ್ಟಿ ಕೊಡುವ ಸಾಹಸ..!!


//1//
ಉಪವಾಸ ಕೂತ
ನಿನ್ನ ನೇನಪುಗಳು
ಪ್ರತಿಭಟನೆಗಿಳಿಯುವ ಮುನ್ನವೆ
ಕವಿತೆಗಳಾಗಿಸಿದ ಪುಟ್ಟ ಮನಸ್ಸಿಗೆ
ಸಾವಿರ ನಮನಗಳು..!!


//2//
 
ಪ್ರಿಯ ಗೇಳತಿ, ನೀನು..
ಪದಗಳ ಹಂಗಿಗೆ ಒಳಗಾಗದ
ಶೃಂಗಾರ ದೃಶ್ಯ ಕಾವ್ಯ..ಎಂದರೆ..!!
ಎಲ್ಲಿ ನಿನ್ನ ಸೌಂದರ್ಯಕ್ಕೆ
ಹೊಗಳಿಕೆ ಕೊರತೆಯಾಗಿ
ಕ್ಯಾತೆ ತೆಗೆದು ಮುನಿಸಿಕೊಳ್ಳತ್ತೋ
ಎಂಬ ನಡುಕ ಸುರುವಾಗಿದೆ ನಂಗೆ..!!


//3// 

ಕಾಡುವ
ಕನಸುಗಳಿವೆ ಎಂದು
ನೋಡುವ ಕಣ್ಣುಗಳು..!!
ನಿದ್ದೆಯನ್ನು ಮರೆತು
ಒದ್ದೆಯಾಗಿದ್ದು ಮಾತ್ರ
ನಿನ್ನ ನೆನೆಪ
ಮಳೆ ಹನಿಗಳಿಗೆ..!!


//4//
 ನೀನು ರಂಭೆ
ಊರ್ವಶಿ-ತಿಲೋತ್ತಮೆ
ಹಾಗೆ ಹೀಗೆ ಎಂದೆಲ್ಲ
ವರ್ಣಿಸಿದ ಆ ಕವಿ ಪುಂಗವರ
ಚಿತ್ರಿಕೆಗಳೆಲ್ಲ..!!ಪ್ರೇಮಾವೇಶದ ಪ್ರತಿಮೆಗಳೆ
ಹೊರತು ನಿಜ-ಪ್ರಾಮಾಣಿಕವಲ್ಲ
ಅನ್ನೋದು ನಿತ್ಯ ಸತ್ಯ..!

//5// 
ಓ ಚಂದ್ರಮನೇ..
ಬರಿ ಪ್ರೇಮಿಗಳಿಗಷ್ಟೆ ಮಿಸಲಾಗಿರುವಂತೆ
ಜಗತ್ತೆಲ್ಲ ಮಲಗಿದ ಮೇಲೆ
ಸೃಷ್ಟಿಸಿದ ಸ್ವರ್ಗ ಸದೃಶ್ಯದಂತ
ಆ..ನಿನ್ನ ಬೆಳದಿಂಗಳಿಂದ ವಂಚಿತರಾದ
ಕಾರಣಕ್ಕೆ ಎನೋ ನಿನ್ನನ್ನು
ಜನರು ಅಡ್ಡಡ ಕತ್ತರಿಸಿ ತುಂಡು ತುಂಡಾಗಿಸಿ
ಬಾನಿಗೆಸದದ್ದು..!!

//6//
 

ಖಾಲಿ
ಹೃದಯಕ್ಕೆ ಬೇಲಿ
ಹಾಕಿದರೂ ವೇಷ್ಟು..!!
ಯಾಕೆಂದರೆ
ಅಲ್ಲಿ ನೀನಿಲ್ಲ..!!
ಇಲ್ಲ ಎಂದು
ಒಳಗೆ ಬರುವ ಬರವಸೆಯು ಇಲ್ಲ..!!


//7//
 ಅಳುತ್ತ
ಕೂಡಬೇಡ ಗೇಳತಿ
ಸುರಿಯುತ್ತಿರೂ ಆ ..ಕಣ್ಣಿರು
ಎಂದೂ ಅಳಿಸಲಾರವು
ನಿನ್ನ ಹಣೆಬರಹ..!!
ಆದರೆ
ಕಷ್ಟ ಪಟ್ಟು ದುಡಿ
ಬೇಕಿದ್ದರೆ ಓಡಿ
ಬಂದು ಅಳಿಸಿದರೂ ಅಳಿಸಬಹುದು
ಆ..ಬೇವರು ಹನಿಗಳು..!!

ಶನಿವಾರ, ನವೆಂಬರ್ 9, 2013

ಅದನ್ನು ಕದ್ದರೂ .ಅವರು...!!

 //1//
ಹಿಗೇಕೆ ಮಾಡಿದೆ ..!!?
 ಹೃದಯವನ್ನು
ಕದಿಯುವ ಜರೂರೆನಿತ್ತು..!!
ಗೇಳತಿ..!
ಕೇಳಿದರೆ ಹೃದಯ ಎಕೆ..!!?
ನನ್ನನ್ನೆ ನಿಂಗೆ ಗೀಪ್ಟಾಗಿ
ಕೊಟ್ಟು ಬಿಡುತ್ತಿದ್ದೆ..!!
ಖುಷಿಯಿಂದ..!!
 //2//
ಹೃದಯ ಕಳ್ಳರು..!!
ಅದನ್ನು
ಅವರು ಕದ್ದರೂ
ಕಳ್ಳರಲ್ಲ..!!
ಪ್ರೇಮಿಗಳು..!!

ಶುಕ್ರವಾರ, ನವೆಂಬರ್ 8, 2013

ಹನಿ..!! ಹನಿ..!!

 ``1``
ಹೆಚ್ಚು ಸಂಭ್ರಮಿಸಲಾಗದೆ
ಇರೋ ಕನಸುಗಳು
ನಂಗೆ ಬೇಡವೆ ಬೇಡ ಗೆಳತಿ.!!
ಹೆಜ್ಜೆ ಹೆಜ್ಜೆಗೂ ನನ್ನೋಡನೆ
ನೀನಿದ್ದರೆ ಸಾಕು ;
ಸಾವೇ ಎದುರಿಗೆ ಬಂದರೂ
ನನಗಿಲ್ಲ ಭೀತಿ!!


``2``
 
ಹಗಲು ನನ್ನಿಂದಲೆ
ಎಂದೂ ,
ರಾತ್ರಿಗೆ ನಮ್ಮಿಂದಲೆ
ಹೊಳಪು ಎಂದೂ ಬೀಗುತ್ತಿರುವ..!!
ಸೂರ್ಯ,ಚುಕ್ಕಿ -ತಾರೆ- ಮಿಂಚು
ಹುಳುಗಳ ನಡುವೆ.;
ರಾತ್ರಿ ಹಗಲಿನ ಹಂಗೀಲ್ಲದೆ
ಬೇಳಗುತ್ತಲೆ ಇರೋ
ನನ್ನವಳ ಕಣ್ಣುಗಳು
ಜಗದ ಸೂಜಿಗ..!!!


``3``
 
ಗೋತ್ತಾ..ಚೆಲುವೆ..!!?
ನೀನು ಮಿಂಚಿದಾಗಲೆ
ಮುದ್ದಾಗಿ ಕಾಣುವ
ದಾರಿ ಹೋಕ ನಾನು..!!
ನನ್ನ ರೂಪ
ನಿಂಗೆ ಸಹ್ಯವಾಗದಿದ್ದರೆ
ಸುರಿಸಿ ಬಿಡು
ಕಪ್ಪು ಮೋಡಗಳ
ಮಳೆ ಹನಿಗಳ..!!


``4``
 
ಅವತ್ತಿನಿಂದ
ಇವತ್ತಿನವರೆಗೂ
ದಡಕ್ಕೆ ಬರುವ
ಪ್ರತಿಯೋಬ್ಬರ ಕಾಲಿಗೆ
ಬಿದ್ದು ಹೊರಳಾಡಿ ;
ಬೋರ್..!! ಎಂದು ಅಳುತ್ತ..
ಆ..ನದಿ..ಸಮುದ್ರದ ಅಲೆ…!!.
ಕೇಳುತ್ತಿರುವದು
ನಿನ್ನ ಬಗ್ಗೆ ನಲ್ಲೇ.!!!


``5``

 ಮುದ್ದು ಮುದ್ದಾಗಿ ಅರಳಿ
ನಿಲ್ಲುವ
ಆ..ಹೂವುಗಳಿಗೇನು..
ಗೋತ್ತು..?
ಭಾನುವಾರ ರಜೆ
ಎಂದು..!!


``6``

 ಮುದ್ದು ಗೇಳತಿಯೇ..
ನಿನ್ನ ಬಣ್ಣ ಬಣ್ಣದ
ಕನಸುಗಳ ಕಣ್ಣುಗಳಿಗೇಕೆ..!!?:
ಕಪ್ಪು ಕಾಡಿಗೆಯ ಬೇಲಿ..!!


``7`` 

ಭೂಲೋಕದ ಎಷ್ಟೋ
ಬರಹಗಳಿಗೆ..!! ಜ್ಙಾನಪೀಠ ,ಬೂಕರ, ನೋಬೇಲ್..!!
ಸಾಹಿತ್ಯ ಪುರಸ್ಕಾರ ಸಿಕ್ಕ ಹಾಗೆ
ದೇವಲೋಕದ ಆ..ಬ್ರಹ್ಮನ
ಹಣೆಬರಹಗಳಿಗೆ ಪ್ರಶಸ್ತಿ ಪುರಸ್ಕಾರ
ಸಿಕ್ಕಲ್ಲವೇಕೆ ಇನ್ನೂವರೆಗೆ..!!?


``8`` 

ನೀನು ಮತ್ತು
ನಿನ್ನ ನೆನಪುಗಳನ್ನು ಬರೆದಿಟ್ಟರೆ
ಸಿಗಬಹುದು ಜ್ಙಾನಪೀಠ ,ಬೂಕರ ಪ್ರಶಸ್ತಿ
ಆದರೆ ಅವುಗಳೇಲ್ಲಕ್ಕಿಂತ
ಮಿಗಿಲಾದ ನೀನು
ಮತ್ತೆ ಸಿಗೋಲ್ಲ ಅನ್ನೋದು
ಎಷ್ಟೋಂದು ಕ್ರೂರ ಸತ್ಯ..!! ಅಲ್ಲವಾ ??!! ಡಿಯರ್..!!


``9``

 ನಾನು ಸಾಯುವ
ಸಡಗರದಲ್ಲಿಯು
ನಮ್ಮನ್ನು ಪ್ರೀತಿಸಿದವರ
ಅಳುವಿನ ಗೋಳಾಟ..!!
ಆದರೂ ಹಟ
ಬಿಡದೆ ನಮ್ಮನ್ನು ಮತ್ತೆ ಬದುಕಿಸಲು
ವ್ಯರ್ಥ ಹೋರಾಟ..!!

 

ಮಂಗಳವಾರ, ಅಕ್ಟೋಬರ್ 15, 2013

ಚಿಕ್ಕ ಪುಟ್ಟ ಕವಿತೆಗಳು..!!

- 1-
ಹಚ್ಚಿದ ಹಣತೆ
ಆಗಲೆ ಆರಿತ್ತು
ಒಳಗೆ ಹೋಗಿ
ನೋಡಿದರೆ ಇನ್ನೂ ಬೆಳಕಿತ್ತು !!!
ಆಶ್ಚರ ..!! ವಾಗಿ
ಮುನ್ನೆಡೆದರೆ ಇನ್ನೂ ಆಶ್ಚರ್ಯ..!!
ಎನೂ ಇಲ್ಲ ಅಲ್ಲಿ ;
ನನ್ನವಳ ಮುಗ್ನಗೆಯೊಂದು ಬಿಟ್ಟು.!!

 -2-
ಈ..
ಜೀವನ ಮಾರ್ಗ-
ದಲ್ಲಿ
ಅವಳು..!!
ಎಂದೂ ಬೋರ್..
ಆಗದ ಸ್ವರ್ಗ..!!


 -3-
 ಗೇಳತಿ;
ಬಣ್ಣಕ್ಕೂ
ಬಣ್ಣ ಬಣ್ಣದ ಬಣ್ಣ
ತುಂಬುವ
ಕಣ್ಣು ನಿನ್ನವು..!!


 -4-
 ಕಣ್ಣಲ್ಲೇ ಇದ್ದು
ಕಣ್ಣನ್ನೆ ಅಪ್ಪಿ ಮುದ್ದಾಡಿದ
ಕಣ್ಣಿರು..!!
ಆ ಹುಡುಗಿಯ
ಕಣ್ಣಿಂದ ಜಾರಿ
ಕೆನ್ನೆ ಸವರಿ ಇಷ್ಟವಿಲ್ಲದೆ
ಹೋಗುವಾಗ
ಅವಳ ನುಣುಪಾದ
ಕೆನ್ನೆಗೆ ಹಿಡಿ ಶಾಪ.!! ಹಾಕಿದೆ
ಕಣ್ಣಿರು..!!


-5-
ರಾತ್ರಿಗೆ
ರಾತ್ರಿ.!!
ನಿದ್ದೆ ಮಾಡಕ್ಕೂ
ಬಿಡದ
ಆ ಮಿಂಚು ಹುಳ,
ಚುಕ್ಕಿ-ತಾರೆಗಳಿಗೆ
ರಾತ್ರಿ ಶಾಪ..!! ಹಾಕುತ್ತಿದೆ.

-6-
 ಹೇ ಪ್ರಿಯೇ
ನಿನ್ನ ಕಣ್ಣ ಬೇಳಕಿನ
ಹೊನ್ನ ಹೊನ್ನಲಿಗೆ
ಮಿನಗೋ
ಚುಕ್ಕಿ-ತಾರೆಗಳೆ..!!
ದಿಕ್ಕಾಪಾಲೂ..!!.

  -7-
ಆ ನನ್ನ ಹುಡುಗಿಯ
ದುಖ:ಗೊಂಡ ಕಣ್ಣುಗಳಿಂದ
ಹನಿಹನಿಯಾಗಿ
ಕೆನ್ನೆ ಮೇಲೆ ಉದುರಿದ ಮುತ್ತಿನಂಥ
ಕಣ್ಣಿರನ್ನು ಅಳಿಸಲು
ಹೋದ ರಬ್ಬರಿಗೆ
ತೋಯ್ದು ತೋಪ್ಪಯಾದರೂ
ಮುತ್ತಾದ ಭಾವ..!!

ಭಾನುವಾರ, ಆಗಸ್ಟ್ 4, 2013

ನನ್ನ ಕಣ್ಣುಗಳೇನು ನಿನ್ನ ಚೆಂದದ ಕಲೆಯಾಗಿಸುವ ಉಳಿಯೇ..!!?

ಪದೆ ಪದೆ
ನೋಡಿದಾಗಲೂ ನೀನು
ಎಷ್ಟೊಂದು  ಚೆಲುವೆ ಆಗುತ್ತಲೆ
ಹೋಗುತ್ತಿರುವೆಯಲ್ಲ
 ಮುದ್ದು ಹುಡುಗಿಯೇ..!!
ನನ್ನ
ಕಣ್ಣುಗಳೇನು
ನಿನ್ನ ಗಂಧದ ಮೈನ
ಚೆಂದದ ಕಲೆಯಾಗಿಸುವ
ಉಳಿಯೇ..!!?
ಇಲ್ಲಾ ನಿನ್ನ
ಚೆಲುವಿನ ಶೇರೆಯಲ್ಲಿ
ಬಿದ್ದು ಮುಳುಗೇಳುತ್ತಿರುವ
ಎರಡು ನೀರ  ಹನಿಯೇ..!!?

ಬುಧವಾರ, ಫೆಬ್ರವರಿ 13, 2013

ಪ್ರೇಮಿಗಳೇ.ನೀವಿರಿ ಸ್ವಲ್ಪ ಎಚ್ಚರ..!!

ಪ್ರೀತಿಗೂ
ಬಂತು ಬರ
ಇದೆಲ್ಲಾ ನಮ್ಮವರ
ಕಾರಬಾರ
ಕೊನೆಗೊಂದಿನ
ಪ್ರೀತಿಗೂ ಕರ
ಹಾಕಿಯಾರು
ಪ್ರೇಮಿಗಳೇ.. ನೀವಿರಿ
ಸ್ವಲ್ಪ ಎಚ್ಚರ..!!