ಶುಕ್ರವಾರ, ನವೆಂಬರ್ 8, 2013

ಹನಿ..!! ಹನಿ..!!

 ``1``
ಹೆಚ್ಚು ಸಂಭ್ರಮಿಸಲಾಗದೆ
ಇರೋ ಕನಸುಗಳು
ನಂಗೆ ಬೇಡವೆ ಬೇಡ ಗೆಳತಿ.!!
ಹೆಜ್ಜೆ ಹೆಜ್ಜೆಗೂ ನನ್ನೋಡನೆ
ನೀನಿದ್ದರೆ ಸಾಕು ;
ಸಾವೇ ಎದುರಿಗೆ ಬಂದರೂ
ನನಗಿಲ್ಲ ಭೀತಿ!!


``2``
 
ಹಗಲು ನನ್ನಿಂದಲೆ
ಎಂದೂ ,
ರಾತ್ರಿಗೆ ನಮ್ಮಿಂದಲೆ
ಹೊಳಪು ಎಂದೂ ಬೀಗುತ್ತಿರುವ..!!
ಸೂರ್ಯ,ಚುಕ್ಕಿ -ತಾರೆ- ಮಿಂಚು
ಹುಳುಗಳ ನಡುವೆ.;
ರಾತ್ರಿ ಹಗಲಿನ ಹಂಗೀಲ್ಲದೆ
ಬೇಳಗುತ್ತಲೆ ಇರೋ
ನನ್ನವಳ ಕಣ್ಣುಗಳು
ಜಗದ ಸೂಜಿಗ..!!!


``3``
 
ಗೋತ್ತಾ..ಚೆಲುವೆ..!!?
ನೀನು ಮಿಂಚಿದಾಗಲೆ
ಮುದ್ದಾಗಿ ಕಾಣುವ
ದಾರಿ ಹೋಕ ನಾನು..!!
ನನ್ನ ರೂಪ
ನಿಂಗೆ ಸಹ್ಯವಾಗದಿದ್ದರೆ
ಸುರಿಸಿ ಬಿಡು
ಕಪ್ಪು ಮೋಡಗಳ
ಮಳೆ ಹನಿಗಳ..!!


``4``
 
ಅವತ್ತಿನಿಂದ
ಇವತ್ತಿನವರೆಗೂ
ದಡಕ್ಕೆ ಬರುವ
ಪ್ರತಿಯೋಬ್ಬರ ಕಾಲಿಗೆ
ಬಿದ್ದು ಹೊರಳಾಡಿ ;
ಬೋರ್..!! ಎಂದು ಅಳುತ್ತ..
ಆ..ನದಿ..ಸಮುದ್ರದ ಅಲೆ…!!.
ಕೇಳುತ್ತಿರುವದು
ನಿನ್ನ ಬಗ್ಗೆ ನಲ್ಲೇ.!!!


``5``

 ಮುದ್ದು ಮುದ್ದಾಗಿ ಅರಳಿ
ನಿಲ್ಲುವ
ಆ..ಹೂವುಗಳಿಗೇನು..
ಗೋತ್ತು..?
ಭಾನುವಾರ ರಜೆ
ಎಂದು..!!


``6``

 ಮುದ್ದು ಗೇಳತಿಯೇ..
ನಿನ್ನ ಬಣ್ಣ ಬಣ್ಣದ
ಕನಸುಗಳ ಕಣ್ಣುಗಳಿಗೇಕೆ..!!?:
ಕಪ್ಪು ಕಾಡಿಗೆಯ ಬೇಲಿ..!!


``7`` 

ಭೂಲೋಕದ ಎಷ್ಟೋ
ಬರಹಗಳಿಗೆ..!! ಜ್ಙಾನಪೀಠ ,ಬೂಕರ, ನೋಬೇಲ್..!!
ಸಾಹಿತ್ಯ ಪುರಸ್ಕಾರ ಸಿಕ್ಕ ಹಾಗೆ
ದೇವಲೋಕದ ಆ..ಬ್ರಹ್ಮನ
ಹಣೆಬರಹಗಳಿಗೆ ಪ್ರಶಸ್ತಿ ಪುರಸ್ಕಾರ
ಸಿಕ್ಕಲ್ಲವೇಕೆ ಇನ್ನೂವರೆಗೆ..!!?


``8`` 

ನೀನು ಮತ್ತು
ನಿನ್ನ ನೆನಪುಗಳನ್ನು ಬರೆದಿಟ್ಟರೆ
ಸಿಗಬಹುದು ಜ್ಙಾನಪೀಠ ,ಬೂಕರ ಪ್ರಶಸ್ತಿ
ಆದರೆ ಅವುಗಳೇಲ್ಲಕ್ಕಿಂತ
ಮಿಗಿಲಾದ ನೀನು
ಮತ್ತೆ ಸಿಗೋಲ್ಲ ಅನ್ನೋದು
ಎಷ್ಟೋಂದು ಕ್ರೂರ ಸತ್ಯ..!! ಅಲ್ಲವಾ ??!! ಡಿಯರ್..!!


``9``

 ನಾನು ಸಾಯುವ
ಸಡಗರದಲ್ಲಿಯು
ನಮ್ಮನ್ನು ಪ್ರೀತಿಸಿದವರ
ಅಳುವಿನ ಗೋಳಾಟ..!!
ಆದರೂ ಹಟ
ಬಿಡದೆ ನಮ್ಮನ್ನು ಮತ್ತೆ ಬದುಕಿಸಲು
ವ್ಯರ್ಥ ಹೋರಾಟ..!!

 

ಕಾಮೆಂಟ್‌ಗಳಿಲ್ಲ: