
ಪ್ರೀತಿಯನ್ನು ನೋಡಲು ಕಲಿತ ಈ ಮನ,
ಅದರ ಹಿಂದಿದ್ದ ನೋವನ್ನು
ಸಹಿಸಿಕೊಳ್ಳಲು ಏಕೆ ಕಲಿಯಲಿಲ್ಲ???
ನನ್ನನ್ನೇ ನಾನು ಮರೆಯುವಷ್ಟು
ನಿನ್ನ ಪ್ರೀತಿಸಲು ಕಲಿತ ಈ ಹೃದಯ,
ನಿನ್ನ ಮರೆಯುವ
ಕನಸನ್ನೂ ಏಕೆ ಕಾಣಲಿಲ್ಲ??
ಈ ನನ್ನೆಲ್ಲ ಹುಚ್ಚು ಪ್ರಶ್ನೆಗಳಿಗೆ
ನೀನೆಂದು ಉತ್ತರಿಸುವುದಿಲ್ಲವೆಂದು ತಿಳಿದಿದ್ದರೂ,
ನಿನ್ನ ಆ ಮೌನದಲ್ಲೇ
ನನ್ನ ಒಲವನ್ನು ನಿರೀಕ್ಷಿಸುತ್ತ
ಪ್ರಶ್ನೆಯನ್ನೇ ಏಕೆ ಮರೆತೆ?
ಏಕೆಂದರೆ ನನಸಾಗದ ಕನಸಿಗೆ
ಹಗಲಲ್ಲೂ ಕನಸು ಕಾಣುತ್ತಿರುವ ಪೆದ್ದಿ ನಾನು....
[ ರಚನೆ: ರಶ್ಮೀ ದೇವನಹಳ್ಳಿ , ಸ್ಪೇಷೆಲ್ ಥ್ಯಾಂಕ್ಸ ಟು" ಪ್ರೀತಿ v/s ನೋವು..!!" ಕಮ್ಯೂನಿಟ್ ]
4 ಕಾಮೆಂಟ್‌ಗಳು:
nice..!
nice one
lovely lines
kanasu...kavana tumbaa chennagide....ನಿನ್ನ ಪ್ರೀತಿಸಲು ಕಲಿತ ಹೃದಯಕ್ಕೆ ಮರೆಯುವ ಹಾದಿ ಗೊತ್ತಿಲ್ಲ..! matte matte kaadutidde...Vry nice...
ಕಾಮೆಂಟ್ ಪೋಸ್ಟ್ ಮಾಡಿ