ಮಂಗಳವಾರ, ನವೆಂಬರ್ 26, 2013

ನಾಲ್ಕು ಸಾಲಿನ ಹನಿಗಳಲ್ಲಿ ನಿನ್ನ ಕಟ್ಟಿ ಕೊಡುವ ಸಾಹಸ..!!


//1//
ಉಪವಾಸ ಕೂತ
ನಿನ್ನ ನೇನಪುಗಳು
ಪ್ರತಿಭಟನೆಗಿಳಿಯುವ ಮುನ್ನವೆ
ಕವಿತೆಗಳಾಗಿಸಿದ ಪುಟ್ಟ ಮನಸ್ಸಿಗೆ
ಸಾವಿರ ನಮನಗಳು..!!


//2//
 
ಪ್ರಿಯ ಗೇಳತಿ, ನೀನು..
ಪದಗಳ ಹಂಗಿಗೆ ಒಳಗಾಗದ
ಶೃಂಗಾರ ದೃಶ್ಯ ಕಾವ್ಯ..ಎಂದರೆ..!!
ಎಲ್ಲಿ ನಿನ್ನ ಸೌಂದರ್ಯಕ್ಕೆ
ಹೊಗಳಿಕೆ ಕೊರತೆಯಾಗಿ
ಕ್ಯಾತೆ ತೆಗೆದು ಮುನಿಸಿಕೊಳ್ಳತ್ತೋ
ಎಂಬ ನಡುಕ ಸುರುವಾಗಿದೆ ನಂಗೆ..!!


//3// 

ಕಾಡುವ
ಕನಸುಗಳಿವೆ ಎಂದು
ನೋಡುವ ಕಣ್ಣುಗಳು..!!
ನಿದ್ದೆಯನ್ನು ಮರೆತು
ಒದ್ದೆಯಾಗಿದ್ದು ಮಾತ್ರ
ನಿನ್ನ ನೆನೆಪ
ಮಳೆ ಹನಿಗಳಿಗೆ..!!


//4//
 ನೀನು ರಂಭೆ
ಊರ್ವಶಿ-ತಿಲೋತ್ತಮೆ
ಹಾಗೆ ಹೀಗೆ ಎಂದೆಲ್ಲ
ವರ್ಣಿಸಿದ ಆ ಕವಿ ಪುಂಗವರ
ಚಿತ್ರಿಕೆಗಳೆಲ್ಲ..!!ಪ್ರೇಮಾವೇಶದ ಪ್ರತಿಮೆಗಳೆ
ಹೊರತು ನಿಜ-ಪ್ರಾಮಾಣಿಕವಲ್ಲ
ಅನ್ನೋದು ನಿತ್ಯ ಸತ್ಯ..!

//5// 
ಓ ಚಂದ್ರಮನೇ..
ಬರಿ ಪ್ರೇಮಿಗಳಿಗಷ್ಟೆ ಮಿಸಲಾಗಿರುವಂತೆ
ಜಗತ್ತೆಲ್ಲ ಮಲಗಿದ ಮೇಲೆ
ಸೃಷ್ಟಿಸಿದ ಸ್ವರ್ಗ ಸದೃಶ್ಯದಂತ
ಆ..ನಿನ್ನ ಬೆಳದಿಂಗಳಿಂದ ವಂಚಿತರಾದ
ಕಾರಣಕ್ಕೆ ಎನೋ ನಿನ್ನನ್ನು
ಜನರು ಅಡ್ಡಡ ಕತ್ತರಿಸಿ ತುಂಡು ತುಂಡಾಗಿಸಿ
ಬಾನಿಗೆಸದದ್ದು..!!

//6//
 

ಖಾಲಿ
ಹೃದಯಕ್ಕೆ ಬೇಲಿ
ಹಾಕಿದರೂ ವೇಷ್ಟು..!!
ಯಾಕೆಂದರೆ
ಅಲ್ಲಿ ನೀನಿಲ್ಲ..!!
ಇಲ್ಲ ಎಂದು
ಒಳಗೆ ಬರುವ ಬರವಸೆಯು ಇಲ್ಲ..!!


//7//
 ಅಳುತ್ತ
ಕೂಡಬೇಡ ಗೇಳತಿ
ಸುರಿಯುತ್ತಿರೂ ಆ ..ಕಣ್ಣಿರು
ಎಂದೂ ಅಳಿಸಲಾರವು
ನಿನ್ನ ಹಣೆಬರಹ..!!
ಆದರೆ
ಕಷ್ಟ ಪಟ್ಟು ದುಡಿ
ಬೇಕಿದ್ದರೆ ಓಡಿ
ಬಂದು ಅಳಿಸಿದರೂ ಅಳಿಸಬಹುದು
ಆ..ಬೇವರು ಹನಿಗಳು..!!

5 ಕಾಮೆಂಟ್‌ಗಳು:

prashasti ಹೇಳಿದರು...

ಚೆನ್ನಾಗಿದೆ ಕವನಗುಛ್ಚಗಳು :-)
ಚಂದ್ರನನ್ನು ತುಂಡರಿಸಿ ಎಸೆದ ಕಲ್ಪನೆ.. ವಾವ್.. :-)

Unknown ಹೇಳಿದರು...

ನಿಮ್ಮ ಕವನದ ಸಾಲುಗಳಲ್ಲಿ ಚಂದ್ರನನ್ನು ವರ್ಣಿಸಿದ್ದು, ಕವಿ ಪುಂಗವರ ವರ್ಣನೆಯನ್ನು ಬಣ್ಣಿಸಿದ್ದು ಚೆನ್ನಾಗಿದೆ.

ಕನಸು ಹೇಳಿದರು...

ಪ್ರಶಸ್ತಿ ಸರ್ & ಚೆಂದ್ರಶೇಖರ ಸರ್ ನನ್ನ ಬ್ಲಾಗಗೆ ಬಂದು ಕವಿತೆ ಓದಿ ಮೆಚ್ಚಿಕೊಂಡು ಕಾಮೇಂಟ್ ಮಾಡಿದ್ದಕ್ಕೆ ಅನಂತ ಧನ್ಯವಾದಗಳು.ನಿಮ್ಮ ಪ್ರೋತ್ಸಹ ಹಿಗೆ ಇರಲಿ.

Unknown ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Unknown ಹೇಳಿದರು...

ಸೂಪರ್, ಚೆನ್ನಾಗಿವೆ...