ಮಂಗಳವಾರ, ಫೆಬ್ರವರಿ 14, 2017

ಕಳ್ಳ ಹುಡುಗಿಯರ ಪಾಲಾಗಬಾರದೆಂದು ಕೊಡುತ್ತಿದ್ದೆನ್ನಷ್ಟೆ..!!

ಪ್ರೀಯ ಗೆಳತಿ
ನಿನ್ನಿಂದ ತುಸು
ದೂರ ಇರುವಂತೆ ನಟಿಸುತ್ತಿದ್ದ
ನಾನು ;
ಕೊನೆಯವರೆಗೂ
ನನ್ನ ಮನಸಿನಲ್ಲಿರುವ
ಭಾವನೆಗಳನ್ನು ನಿನ್ನ ಮುಂದೆ
ಹೇಳಿಕೊಳ್ಳಲು ಆಗಲೆ ಇಲ್ಲ..!!

.
ಎಷ್ಟೋ ಸಾರಿ
ನಿನ್ನ ಮುಂದೆ
ನಾ ಬಂದು ನಿಂತಾಗ
ನನ್ನೆದೆಯ ಪಿಸು ಮಾತುಗಳನ್ನು
ಮೈಯೆಲ್ಲ ಕಿವಿಯಾಗಿಸಿ
 ಕೇಳಿಸಿಕೊಂಡಿದ್ದಿಯಾ..!!
ಆದರೆ
ನೀನು ಕೇಳಿಸಿಕೊಂಡಿದಿಯಾ
ಅಂತಾ ನಾ ನನ್ನದೆಯ
ಭಾವನೆಗಳನ್ನು ಹೇಳದೆ
ಮೂರ್ಖನಾದೆ..!!

ನಿನ್ನಲ್ಲಿ
ಪ್ರೀತಿ ಇಲ್ಲ ಎಂದು
ನನ್ನದೆಯ ಪ್ರೀತಿಯನ್ನೆಲ್ಲ
ನಿನಗೆ ಕೊಡುತ್ತಿಲ್ಲ ಗೇಳತಿ..!!
ನನ್ನ ಪ್ರೀತಿ
ಕಳ್ಳ ಹುಡುಗಿಯರ
ಪಾಲಾಗಬಾರದೆಂದು
ಕೊಡುತ್ತಿದ್ದೆನ್ನಷ್ಟೆ..!!

ನಾಳೆ
ಪೆಬ್ರುವರಿ ಹದಿನಾಲ್ಕು
ನಲ್ಲೆ
ಸಹಿ ಹಾಕು
ನಮ್ಮ ಪ್ರೀತಿಗೆ;
ನಮ್ಮ ಬದುಕಿಗೂ ಸಿಗಲಿ
ಒಂದು ಬ್ರೇಕ್ಕು..!!

1 ಕಾಮೆಂಟ್‌:

ಮನಸಿನಮನೆಯವನು ಹೇಳಿದರು...

ನೀ ಎದುರೇ ನಿಂತಾಗಲೂ ನುಡಿಯಲಾಗದ ಮೌನ
ಮುಖ ನೋಡದೆ ಎದೆದನಿ ಕೇಳಿ ತಿಳಿ ನನ್ನ ಮನದ ಮಾತನ್ನ

ಚೆನ್ನಾಗಿದೆ ಕವನ

ನಿಮ್ಮ ಪ್ರೀತಿ ಬೇಗ ಮುಟ್ಟಲಿ ಮುಟ್ಟಬೇಕಾದ ಹೃದಯವ, ಕಳ್ಳರ ಪಾಲಾಗದಂತೆ