ಶುಕ್ರವಾರ, ಡಿಸೆಂಬರ್ 15, 2023

ಪ್ರೀತಿ ಎಂದರೆ ಎನೂ ಅಲ್ಲ ಆದರೂ ಎಲ್ಲವೂ..ಹೌದು..!

 ಪ್ರೀತಿ ಎಂದರೆ...

ಎನೂ ಅಲ್ಲ..

ಆದರೂ ಎಲ್ಲವೂ ಹೌದು..!!


ಪ್ರೀತಿ ಎಂದರೆ...

ನಾನು ಮತ್ತು ನೀನು

ಬೇರೆ ಏನೋ  

ಅಂದರೂ ಹೌದು..!!


 ಪ್ರೀತಿ   ಎಂದರೆ...

ಎಲ್ಲವೂ ಇರುವ 

ಆ ಭಾನು ಈ ಬೂಮಿ 

ಎನೂ ಇರದ

ಮರ ಭೂಮಿಯೂ ಹೌದು...!!


ಪ್ರೀತಿ ಎಂದರೆ...

ಏನಂತ ಗೊತ್ತಿಲ್ಲ..

ಆದರೂ ಎಲ್ಲ..!!

ಬೇವು  ಬೆಲ್ಲ..

ಇನ್ನೇನು ಅಲ್ಲ...!!

ಮಂಗಳವಾರ, ಫೆಬ್ರವರಿ 14, 2017

ಕಳ್ಳ ಹುಡುಗಿಯರ ಪಾಲಾಗಬಾರದೆಂದು ಕೊಡುತ್ತಿದ್ದೆನ್ನಷ್ಟೆ..!!

ಪ್ರೀಯ ಗೆಳತಿ
ನಿನ್ನಿಂದ ತುಸು
ದೂರ ಇರುವಂತೆ ನಟಿಸುತ್ತಿದ್ದ
ನಾನು ;
ಕೊನೆಯವರೆಗೂ
ನನ್ನ ಮನಸಿನಲ್ಲಿರುವ
ಭಾವನೆಗಳನ್ನು ನಿನ್ನ ಮುಂದೆ
ಹೇಳಿಕೊಳ್ಳಲು ಆಗಲೆ ಇಲ್ಲ..!!

.
ಎಷ್ಟೋ ಸಾರಿ
ನಿನ್ನ ಮುಂದೆ
ನಾ ಬಂದು ನಿಂತಾಗ
ನನ್ನೆದೆಯ ಪಿಸು ಮಾತುಗಳನ್ನು
ಮೈಯೆಲ್ಲ ಕಿವಿಯಾಗಿಸಿ
 ಕೇಳಿಸಿಕೊಂಡಿದ್ದಿಯಾ..!!
ಆದರೆ
ನೀನು ಕೇಳಿಸಿಕೊಂಡಿದಿಯಾ
ಅಂತಾ ನಾ ನನ್ನದೆಯ
ಭಾವನೆಗಳನ್ನು ಹೇಳದೆ
ಮೂರ್ಖನಾದೆ..!!

ನಿನ್ನಲ್ಲಿ
ಪ್ರೀತಿ ಇಲ್ಲ ಎಂದು
ನನ್ನದೆಯ ಪ್ರೀತಿಯನ್ನೆಲ್ಲ
ನಿನಗೆ ಕೊಡುತ್ತಿಲ್ಲ ಗೇಳತಿ..!!
ನನ್ನ ಪ್ರೀತಿ
ಕಳ್ಳ ಹುಡುಗಿಯರ
ಪಾಲಾಗಬಾರದೆಂದು
ಕೊಡುತ್ತಿದ್ದೆನ್ನಷ್ಟೆ..!!

ನಾಳೆ
ಪೆಬ್ರುವರಿ ಹದಿನಾಲ್ಕು
ನಲ್ಲೆ
ಸಹಿ ಹಾಕು
ನಮ್ಮ ಪ್ರೀತಿಗೆ;
ನಮ್ಮ ಬದುಕಿಗೂ ಸಿಗಲಿ
ಒಂದು ಬ್ರೇಕ್ಕು..!!

ಸೋಮವಾರ, ಫೆಬ್ರವರಿ 13, 2017

ಹೃದಯವೆಂಬ ಪ್ರೀತಿಗೆ ಯಾವದು ಸಾಟಿಯಾಗದು..!!

ಆ ಪುಟ್ಟ ಹೃದಯ
ಆವಾಗಿನಿಂದಲೂ 
ಬಡೆಯುತ್ತಿದ್ದರೂ ತೆಗೆಯಲಿಲ್ಲ
ಎದೆಯ ಬಾಗಿಲು.!!
ಆದರೆ ಈಗ
ಇವರು ಬಡೆಯುತ್ತಿದ್ದಾರೆ..!!
ಪಾಪ ಆ..ಹೃದಯ
ತಣ್ಣಗೆ ಮಲಗಿಕೊಂಡಿದೆ
ನೋಡುತ್ತ ಮುಗಿಲು..!!

ಶನಿವಾರ, ಜನವರಿ 31, 2015

ನಿನ್ನ ನೆನಪ ಸಂಭ್ರಮದಲ್ಲಿಯ ಪ್ರೀತಿ ಹಸಿರಾಗಲಿ

``1``
ಖುದ್ದು
ಅವಳ ನೆನಪಿನ ಕೀರು
ಬೇರಳನ್ನೇ ಹಿಡಿದು
 ಹೊರಟ
ನನ್ನ ದೊಡ್ಡ
ಮನಸಿಗೆ;
ಕಣ್ಣ್ ರೆಪ್ಪೇಗಳ ಅಂಚಲ್ಲಿ
ಜೋಕಾಲಿ ಆಡುತ್ತಿರುವ
ಸಣ್ಣ ಹನಿಗಳ
ಖುಷಿಯಿರಲಿಲ್ಲ..!!

``2``
ಹೆಜ್ಜೆ ಹೆಜ್ಜೆಗೂ
ಮುತ್ತಿಕೊಳ್ಳುವ ನೆನಪುಗಳ
ಗಲಾಟೆಯೋಳಗೆ
ಆವ ಕೊಟ್ಟ ಕಾಲ್ಗೇಜ್ಜೆ
ಜಾರಿ ಹೋಗದಿರಲಿ ದೇವರೆ...!!!

ಗುರುವಾರ, ಡಿಸೆಂಬರ್ 5, 2013

ಸಾಲು ಹನಿಗಳಲ್ಲಿ ಸಾವಿರ ಕನಸು..!!

 ``1``
ನೀನು
ಕಣ್ಣಿಗೆ ಬಿದ್ದ ಮೇಲೆ
ಹುಡುಗಿ;
ಇಡಿ ಜಗತ್ತು ಅಸ್ಪಷ್ಟವಾಗಿ
ನಿನ್ನ ಬಿಟ್ಟು ಬೇರೆನು
ಕಾಣಲೇ
ಇಲ್ಲ..!!
.
 ``2``
 ತುಟಿ ತೊಂಡೆ
ಬೇರಳು ಬೆಂಡೆ
ನಾನಂದು ಕೊಂಡೆ
ಹೀಗೆ ವರ್ಣಿಸಿದವ ಕಲ್ಲು ಬಂಡೆ
ಯಾಕೆಂದರೆ ಪ್ರತಿ ದಿನಾನು
ಅಲ್ಲ ಸಂಡೆ..!!
ನಿಜ ಹೆಳಬೇಕೆಂದರೆ
ನೀನು ಅಷ್ಟೆನೂ
ಸುಂದರಿ ಅಲ್ಲಾ
ಹಾಗೆಂದು ವರ್ಣಿಸಿದರೆ
ಅದು ಪ್ರಾಮಾಣಿಕವಲ್ಲ..!!
  ``3``
ಕಡಲ ದಡದ ಮೇಲೆ
ಬರೆದ ನಿನ್ನ ಹೆಸರ
ಅಳಿಸಿ ಹೊದ ಆ..ಅಲೆಗಳು
ಮರಳಿ ಬಂದು ಸಾರಿ ಕೇಳುವಷ್ಟರಲ್ಲಿ..!!
ದುಃಖಗೊಂಡ ಕಣ್ಣ ಹನಿಗಳು
ಆತ್ಮ ಹತ್ಯೆ ಮಾಡಿಕೊಂಡಿದ್ದವು..!!
``4``
 ನನ್ನ ಹೃದಯವೇನು
ಕತ್ತಲೆಯ ಗೂಡಲ್ಲ..!!
ಅದು ಬೇಳಕಿನ ಮಗ್ಗಲು
ಆದರೂ
ನನಗೆ ಗೋತ್ತಾಗದ ಹಾಗೆ
ನೀನು ಅದರೋಳಗೆ ನುಸುಳಿದ್ದು
ನನಗಷ್ಟೆ ಅಲ್ಲ
ವಿಜ್ಞಾನಕ್ಕೂ ಸವಾಲು...!!

ಮಂಗಳವಾರ, ನವೆಂಬರ್ 26, 2013

ನಾಲ್ಕು ಸಾಲಿನ ಹನಿಗಳಲ್ಲಿ ನಿನ್ನ ಕಟ್ಟಿ ಕೊಡುವ ಸಾಹಸ..!!


//1//
ಉಪವಾಸ ಕೂತ
ನಿನ್ನ ನೇನಪುಗಳು
ಪ್ರತಿಭಟನೆಗಿಳಿಯುವ ಮುನ್ನವೆ
ಕವಿತೆಗಳಾಗಿಸಿದ ಪುಟ್ಟ ಮನಸ್ಸಿಗೆ
ಸಾವಿರ ನಮನಗಳು..!!


//2//
 
ಪ್ರಿಯ ಗೇಳತಿ, ನೀನು..
ಪದಗಳ ಹಂಗಿಗೆ ಒಳಗಾಗದ
ಶೃಂಗಾರ ದೃಶ್ಯ ಕಾವ್ಯ..ಎಂದರೆ..!!
ಎಲ್ಲಿ ನಿನ್ನ ಸೌಂದರ್ಯಕ್ಕೆ
ಹೊಗಳಿಕೆ ಕೊರತೆಯಾಗಿ
ಕ್ಯಾತೆ ತೆಗೆದು ಮುನಿಸಿಕೊಳ್ಳತ್ತೋ
ಎಂಬ ನಡುಕ ಸುರುವಾಗಿದೆ ನಂಗೆ..!!


//3// 

ಕಾಡುವ
ಕನಸುಗಳಿವೆ ಎಂದು
ನೋಡುವ ಕಣ್ಣುಗಳು..!!
ನಿದ್ದೆಯನ್ನು ಮರೆತು
ಒದ್ದೆಯಾಗಿದ್ದು ಮಾತ್ರ
ನಿನ್ನ ನೆನೆಪ
ಮಳೆ ಹನಿಗಳಿಗೆ..!!


//4//
 ನೀನು ರಂಭೆ
ಊರ್ವಶಿ-ತಿಲೋತ್ತಮೆ
ಹಾಗೆ ಹೀಗೆ ಎಂದೆಲ್ಲ
ವರ್ಣಿಸಿದ ಆ ಕವಿ ಪುಂಗವರ
ಚಿತ್ರಿಕೆಗಳೆಲ್ಲ..!!ಪ್ರೇಮಾವೇಶದ ಪ್ರತಿಮೆಗಳೆ
ಹೊರತು ನಿಜ-ಪ್ರಾಮಾಣಿಕವಲ್ಲ
ಅನ್ನೋದು ನಿತ್ಯ ಸತ್ಯ..!

//5// 
ಓ ಚಂದ್ರಮನೇ..
ಬರಿ ಪ್ರೇಮಿಗಳಿಗಷ್ಟೆ ಮಿಸಲಾಗಿರುವಂತೆ
ಜಗತ್ತೆಲ್ಲ ಮಲಗಿದ ಮೇಲೆ
ಸೃಷ್ಟಿಸಿದ ಸ್ವರ್ಗ ಸದೃಶ್ಯದಂತ
ಆ..ನಿನ್ನ ಬೆಳದಿಂಗಳಿಂದ ವಂಚಿತರಾದ
ಕಾರಣಕ್ಕೆ ಎನೋ ನಿನ್ನನ್ನು
ಜನರು ಅಡ್ಡಡ ಕತ್ತರಿಸಿ ತುಂಡು ತುಂಡಾಗಿಸಿ
ಬಾನಿಗೆಸದದ್ದು..!!

//6//
 

ಖಾಲಿ
ಹೃದಯಕ್ಕೆ ಬೇಲಿ
ಹಾಕಿದರೂ ವೇಷ್ಟು..!!
ಯಾಕೆಂದರೆ
ಅಲ್ಲಿ ನೀನಿಲ್ಲ..!!
ಇಲ್ಲ ಎಂದು
ಒಳಗೆ ಬರುವ ಬರವಸೆಯು ಇಲ್ಲ..!!


//7//
 ಅಳುತ್ತ
ಕೂಡಬೇಡ ಗೇಳತಿ
ಸುರಿಯುತ್ತಿರೂ ಆ ..ಕಣ್ಣಿರು
ಎಂದೂ ಅಳಿಸಲಾರವು
ನಿನ್ನ ಹಣೆಬರಹ..!!
ಆದರೆ
ಕಷ್ಟ ಪಟ್ಟು ದುಡಿ
ಬೇಕಿದ್ದರೆ ಓಡಿ
ಬಂದು ಅಳಿಸಿದರೂ ಅಳಿಸಬಹುದು
ಆ..ಬೇವರು ಹನಿಗಳು..!!

ಶನಿವಾರ, ನವೆಂಬರ್ 9, 2013

ಅದನ್ನು ಕದ್ದರೂ .ಅವರು...!!

 //1//
ಹಿಗೇಕೆ ಮಾಡಿದೆ ..!!?
 ಹೃದಯವನ್ನು
ಕದಿಯುವ ಜರೂರೆನಿತ್ತು..!!
ಗೇಳತಿ..!
ಕೇಳಿದರೆ ಹೃದಯ ಎಕೆ..!!?
ನನ್ನನ್ನೆ ನಿಂಗೆ ಗೀಪ್ಟಾಗಿ
ಕೊಟ್ಟು ಬಿಡುತ್ತಿದ್ದೆ..!!
ಖುಷಿಯಿಂದ..!!
 //2//
ಹೃದಯ ಕಳ್ಳರು..!!
ಅದನ್ನು
ಅವರು ಕದ್ದರೂ
ಕಳ್ಳರಲ್ಲ..!!
ಪ್ರೇಮಿಗಳು..!!

ಶುಕ್ರವಾರ, ನವೆಂಬರ್ 8, 2013

ಹನಿ..!! ಹನಿ..!!

 ``1``
ಹೆಚ್ಚು ಸಂಭ್ರಮಿಸಲಾಗದೆ
ಇರೋ ಕನಸುಗಳು
ನಂಗೆ ಬೇಡವೆ ಬೇಡ ಗೆಳತಿ.!!
ಹೆಜ್ಜೆ ಹೆಜ್ಜೆಗೂ ನನ್ನೋಡನೆ
ನೀನಿದ್ದರೆ ಸಾಕು ;
ಸಾವೇ ಎದುರಿಗೆ ಬಂದರೂ
ನನಗಿಲ್ಲ ಭೀತಿ!!


``2``
 
ಹಗಲು ನನ್ನಿಂದಲೆ
ಎಂದೂ ,
ರಾತ್ರಿಗೆ ನಮ್ಮಿಂದಲೆ
ಹೊಳಪು ಎಂದೂ ಬೀಗುತ್ತಿರುವ..!!
ಸೂರ್ಯ,ಚುಕ್ಕಿ -ತಾರೆ- ಮಿಂಚು
ಹುಳುಗಳ ನಡುವೆ.;
ರಾತ್ರಿ ಹಗಲಿನ ಹಂಗೀಲ್ಲದೆ
ಬೇಳಗುತ್ತಲೆ ಇರೋ
ನನ್ನವಳ ಕಣ್ಣುಗಳು
ಜಗದ ಸೂಜಿಗ..!!!


``3``
 
ಗೋತ್ತಾ..ಚೆಲುವೆ..!!?
ನೀನು ಮಿಂಚಿದಾಗಲೆ
ಮುದ್ದಾಗಿ ಕಾಣುವ
ದಾರಿ ಹೋಕ ನಾನು..!!
ನನ್ನ ರೂಪ
ನಿಂಗೆ ಸಹ್ಯವಾಗದಿದ್ದರೆ
ಸುರಿಸಿ ಬಿಡು
ಕಪ್ಪು ಮೋಡಗಳ
ಮಳೆ ಹನಿಗಳ..!!


``4``
 
ಅವತ್ತಿನಿಂದ
ಇವತ್ತಿನವರೆಗೂ
ದಡಕ್ಕೆ ಬರುವ
ಪ್ರತಿಯೋಬ್ಬರ ಕಾಲಿಗೆ
ಬಿದ್ದು ಹೊರಳಾಡಿ ;
ಬೋರ್..!! ಎಂದು ಅಳುತ್ತ..
ಆ..ನದಿ..ಸಮುದ್ರದ ಅಲೆ…!!.
ಕೇಳುತ್ತಿರುವದು
ನಿನ್ನ ಬಗ್ಗೆ ನಲ್ಲೇ.!!!


``5``

 ಮುದ್ದು ಮುದ್ದಾಗಿ ಅರಳಿ
ನಿಲ್ಲುವ
ಆ..ಹೂವುಗಳಿಗೇನು..
ಗೋತ್ತು..?
ಭಾನುವಾರ ರಜೆ
ಎಂದು..!!


``6``

 ಮುದ್ದು ಗೇಳತಿಯೇ..
ನಿನ್ನ ಬಣ್ಣ ಬಣ್ಣದ
ಕನಸುಗಳ ಕಣ್ಣುಗಳಿಗೇಕೆ..!!?:
ಕಪ್ಪು ಕಾಡಿಗೆಯ ಬೇಲಿ..!!


``7`` 

ಭೂಲೋಕದ ಎಷ್ಟೋ
ಬರಹಗಳಿಗೆ..!! ಜ್ಙಾನಪೀಠ ,ಬೂಕರ, ನೋಬೇಲ್..!!
ಸಾಹಿತ್ಯ ಪುರಸ್ಕಾರ ಸಿಕ್ಕ ಹಾಗೆ
ದೇವಲೋಕದ ಆ..ಬ್ರಹ್ಮನ
ಹಣೆಬರಹಗಳಿಗೆ ಪ್ರಶಸ್ತಿ ಪುರಸ್ಕಾರ
ಸಿಕ್ಕಲ್ಲವೇಕೆ ಇನ್ನೂವರೆಗೆ..!!?


``8`` 

ನೀನು ಮತ್ತು
ನಿನ್ನ ನೆನಪುಗಳನ್ನು ಬರೆದಿಟ್ಟರೆ
ಸಿಗಬಹುದು ಜ್ಙಾನಪೀಠ ,ಬೂಕರ ಪ್ರಶಸ್ತಿ
ಆದರೆ ಅವುಗಳೇಲ್ಲಕ್ಕಿಂತ
ಮಿಗಿಲಾದ ನೀನು
ಮತ್ತೆ ಸಿಗೋಲ್ಲ ಅನ್ನೋದು
ಎಷ್ಟೋಂದು ಕ್ರೂರ ಸತ್ಯ..!! ಅಲ್ಲವಾ ??!! ಡಿಯರ್..!!


``9``

 ನಾನು ಸಾಯುವ
ಸಡಗರದಲ್ಲಿಯು
ನಮ್ಮನ್ನು ಪ್ರೀತಿಸಿದವರ
ಅಳುವಿನ ಗೋಳಾಟ..!!
ಆದರೂ ಹಟ
ಬಿಡದೆ ನಮ್ಮನ್ನು ಮತ್ತೆ ಬದುಕಿಸಲು
ವ್ಯರ್ಥ ಹೋರಾಟ..!!

 

ಮಂಗಳವಾರ, ಅಕ್ಟೋಬರ್ 15, 2013

ಚಿಕ್ಕ ಪುಟ್ಟ ಕವಿತೆಗಳು..!!

- 1-
ಹಚ್ಚಿದ ಹಣತೆ
ಆಗಲೆ ಆರಿತ್ತು
ಒಳಗೆ ಹೋಗಿ
ನೋಡಿದರೆ ಇನ್ನೂ ಬೆಳಕಿತ್ತು !!!
ಆಶ್ಚರ ..!! ವಾಗಿ
ಮುನ್ನೆಡೆದರೆ ಇನ್ನೂ ಆಶ್ಚರ್ಯ..!!
ಎನೂ ಇಲ್ಲ ಅಲ್ಲಿ ;
ನನ್ನವಳ ಮುಗ್ನಗೆಯೊಂದು ಬಿಟ್ಟು.!!

 -2-
ಈ..
ಜೀವನ ಮಾರ್ಗ-
ದಲ್ಲಿ
ಅವಳು..!!
ಎಂದೂ ಬೋರ್..
ಆಗದ ಸ್ವರ್ಗ..!!


 -3-
 ಗೇಳತಿ;
ಬಣ್ಣಕ್ಕೂ
ಬಣ್ಣ ಬಣ್ಣದ ಬಣ್ಣ
ತುಂಬುವ
ಕಣ್ಣು ನಿನ್ನವು..!!


 -4-
 ಕಣ್ಣಲ್ಲೇ ಇದ್ದು
ಕಣ್ಣನ್ನೆ ಅಪ್ಪಿ ಮುದ್ದಾಡಿದ
ಕಣ್ಣಿರು..!!
ಆ ಹುಡುಗಿಯ
ಕಣ್ಣಿಂದ ಜಾರಿ
ಕೆನ್ನೆ ಸವರಿ ಇಷ್ಟವಿಲ್ಲದೆ
ಹೋಗುವಾಗ
ಅವಳ ನುಣುಪಾದ
ಕೆನ್ನೆಗೆ ಹಿಡಿ ಶಾಪ.!! ಹಾಕಿದೆ
ಕಣ್ಣಿರು..!!


-5-
ರಾತ್ರಿಗೆ
ರಾತ್ರಿ.!!
ನಿದ್ದೆ ಮಾಡಕ್ಕೂ
ಬಿಡದ
ಆ ಮಿಂಚು ಹುಳ,
ಚುಕ್ಕಿ-ತಾರೆಗಳಿಗೆ
ರಾತ್ರಿ ಶಾಪ..!! ಹಾಕುತ್ತಿದೆ.

-6-
 ಹೇ ಪ್ರಿಯೇ
ನಿನ್ನ ಕಣ್ಣ ಬೇಳಕಿನ
ಹೊನ್ನ ಹೊನ್ನಲಿಗೆ
ಮಿನಗೋ
ಚುಕ್ಕಿ-ತಾರೆಗಳೆ..!!
ದಿಕ್ಕಾಪಾಲೂ..!!.

  -7-
ಆ ನನ್ನ ಹುಡುಗಿಯ
ದುಖ:ಗೊಂಡ ಕಣ್ಣುಗಳಿಂದ
ಹನಿಹನಿಯಾಗಿ
ಕೆನ್ನೆ ಮೇಲೆ ಉದುರಿದ ಮುತ್ತಿನಂಥ
ಕಣ್ಣಿರನ್ನು ಅಳಿಸಲು
ಹೋದ ರಬ್ಬರಿಗೆ
ತೋಯ್ದು ತೋಪ್ಪಯಾದರೂ
ಮುತ್ತಾದ ಭಾವ..!!

ಭಾನುವಾರ, ಆಗಸ್ಟ್ 4, 2013

ನನ್ನ ಕಣ್ಣುಗಳೇನು ನಿನ್ನ ಚೆಂದದ ಕಲೆಯಾಗಿಸುವ ಉಳಿಯೇ..!!?

ಪದೆ ಪದೆ
ನೋಡಿದಾಗಲೂ ನೀನು
ಎಷ್ಟೊಂದು  ಚೆಲುವೆ ಆಗುತ್ತಲೆ
ಹೋಗುತ್ತಿರುವೆಯಲ್ಲ
 ಮುದ್ದು ಹುಡುಗಿಯೇ..!!
ನನ್ನ
ಕಣ್ಣುಗಳೇನು
ನಿನ್ನ ಗಂಧದ ಮೈನ
ಚೆಂದದ ಕಲೆಯಾಗಿಸುವ
ಉಳಿಯೇ..!!?
ಇಲ್ಲಾ ನಿನ್ನ
ಚೆಲುವಿನ ಶೇರೆಯಲ್ಲಿ
ಬಿದ್ದು ಮುಳುಗೇಳುತ್ತಿರುವ
ಎರಡು ನೀರ  ಹನಿಯೇ..!!?

ಬುಧವಾರ, ಫೆಬ್ರವರಿ 13, 2013

ಪ್ರೇಮಿಗಳೇ.ನೀವಿರಿ ಸ್ವಲ್ಪ ಎಚ್ಚರ..!!

ಪ್ರೀತಿಗೂ
ಬಂತು ಬರ
ಇದೆಲ್ಲಾ ನಮ್ಮವರ
ಕಾರಬಾರ
ಕೊನೆಗೊಂದಿನ
ಪ್ರೀತಿಗೂ ಕರ
ಹಾಕಿಯಾರು
ಪ್ರೇಮಿಗಳೇ.. ನೀವಿರಿ
ಸ್ವಲ್ಪ ಎಚ್ಚರ..!!



ಗುರುವಾರ, ಜನವರಿ 3, 2013

ಅದು ನಿನಗೋಸ್ಕರ ನಿರ್ಮಿತವಾದದ್ದು ಗೆಳತಿ..!!

ನೀನು
ಕದ ತಟ್ಟುವ
ಯೋಚನೇಯೆ ಬೇಡ ಎಂದು
ನನ್ನ ಹೃದಯ ಬಾಗಿಲು
ಹಾಗೆ ತೆರೆದೆ ಇಟ್ಟಿರುವೆ ಗೆಳತಿ..!!
ಒಳಗೆ ಬರುವಾಗ `` ಯಾರಿದ್ದಿರಿ ``!!?
ಅನ್ನ ಬೇಡ ಪ್ಲೀಜ್...!!
ಅಲ್ಲಿ ಯಾರೂ ಇಲ್ಲ.
ಅದು ನಿನಗೋಸ್ಕರ ನಿರ್ಮಿತವಾದ ``ಪ್ರೇಮ ಸೌಧ``..!!

ಗುರುವಾರ, ಜೂನ್ 7, 2012

ನೀನು ಬರಿ ನೀನಲ್ಲ..ಹೂ ಮಲ್ಲಿಗೆ..!!

ಸಕ್ಕರೆ
ತುಟಿಗಳು..!!
ನಕ್ಕರೆ
ಬೆಳದಿಂಗಳು..!!
ಕಪ್ಪು ಬಿಳುಪು
ಕಂಗಳು
ಕಣ್ಬಿಟ್ಟರೆ
ಹೊಳಪು ತಾರೆಗಳು..!!
ನೀನು ಬರಿ ನೀನಲ್ಲ
ಹೂ ಮಲ್ಲಿಗೆ
ಸಿಹಿ ಸಿಹಿ ಜೇನು
ಈ ಬಾಳಿಗೆ..!!

ಬುಧವಾರ, ಮೇ 30, 2012

ಇವೇರಡು ಬಿಡೋಕೆ ಆಗಲ್ಲ..!!

 -1-

ಪ್ರೀತಿಯನ್ನು
ಮತ್ತು
ಊಟವನ್ನು
ಮಾಡದೆ
ಇರೋಕು ಆಗಲ್ಲ..!!
ಬಿಡದೆ
ಇರೋಕು ಆಗಲ್ಲ..!!

-2-

ಪ್ರೀತಿಯೊಂದು
ಸುಂದರ
ಗುಲಾಬಿ ಹೂವು
ಅಷ್ಟೇ ಅಲ್ಲ
ಅದು ಹಿತವಾದ ನೋವು
ಕೂಡಾ..!!
ಅದಕ್ಕೆ
ಯಾರ ಯಾರೋ
ಬೇಡಾ..!!
ಅಂದರೂ
ನಾನು ನೀನ್ನನ್ನು -ನೀನು ನನ್ನನ್ನು
ಸುಮ್ಮನೆ
ಪ್ರೀತಿಸಿದೆವು
ಕಾರಣ
ಅದು ನಮ್ಮ ಜೀವವು..!!

-3-

ಪ್ರೀತಿ
ಅನ್ನೋದು
ನಿಜವಾಗಲೂ
ಪ್ರೀತಿನೇ..!!
ಬೇರೇ
ಎನೂ ಅಲ್ಲ..!!
ಅಂದರೂ
ಎಲ್ಲವೂ ಹೌದು.!!

ಶನಿವಾರ, ಜನವರಿ 28, 2012

ಸಾಯಲೇಬೇಕೆಂದು ಹಠ ಹಿಡಿದ ಪ್ರೀತಿಗೆ....!!!

ಸಾಯಲೇಬೇಕೆಂದು
ಹಠ ಹಿಡಿದು
ಕುಳಿತುಕೊಂಡಿರುವ
ಮುದ್ದು
ಪ್ರೀತಿಗೆ;
ಯಮ
ಬುದ್ದಿವಾದ
ಹೇಳಲು
ಪ್ರಯತ್ನಿಸುತ್ತಿದ್ದಾನೆ

ಸೋಮವಾರ, ಜನವರಿ 23, 2012

ಈ ಅವಕಾಶ ನಿಂಗೆ ಕಣೋ..!!


ಆಕಾಶದಲ್ಲಿ ಅವಕಾಶ
ನಿಂಗೆ ಗೆಳೆಯಾ...!!
ಬರೆದುಕೋ.., ಗೀಚಿಕೋ....,
ಎನಾದರೂ ಮಾಡಿಕೋ..,
ನಾನೇ ಬರೆದಂತೆ ..!!
ಮುದ್ದು ಮುದ್ದಾಗಿ ಬರೆದುಕೋ....,
ನಿಂಗೆ ನೀನೆ...!!
ಮನಸಿಟ್ಟು..;
ಯಾಕೆಂದರೆ
ನಂಗೆ ಓದಕ್ಕೂ ಬರಲ್ಲ..,
ಬರೆಯೋಕ್ಕೂ ಬರಲ್ಲ...,
ನಾ ಅನಕ್ಷರಸ್ತ
ಅದಕ್ಕೆ ತಾನೆ
ಮುಳುಗೇಳುವ ಸೂರ್ಯನೇ
ನನ್ನ ಹೆಬ್ಬಟ್ಟಿನ
``ಸಹಿ``


ಶನಿವಾರ, ಡಿಸೆಂಬರ್ 31, 2011

ಮಂಗಳವಾರ, ಡಿಸೆಂಬರ್ 13, 2011

ತಪ್ಪು ಮಾಡೋದು ಸಹಜಾ ಕಣೋ..!!

ತಪ್ಪು ಮಾಡೋದು ಮಾನವನ ಸಹಜ ಗುಣ.ಮಾನವ ಎಷ್ಟೆ ಬುದ್ದಿವಂತನಿದ್ದರೂ ಒಮ್ಮಿಲ್ಲಾ ಒಮ್ಮೆಯಾದರೂ ತಪ್ಪು ಮಾಡಿಯೇ ಮಾಡಿರುತ್ತಾನೆ .ಹೌದು ಅದಕ್ಕಾಗಿಯೇ" ತಪ್ಪುಮಾನವನ ಬಂಡವಾಳ " ಎಂದಿದ್ದಾರೆ. ತಪ್ಪುಗಳಿಂದಲೇ ಮಾನವ ಪರಿಪೂರ್ಣತೆ ಕಡೆಗೆ ನಡೆಯುತ್ತಾನೆ.ಹೌದು ಎನ್ನುತ್ತಾರೆ ತಜ್ಙರು.ತಪ್ಪುಗಳಿಂದ ತಪ್ಪಿಸಿಕೋಳ್ಳದವನು ಈ ಜಗತ್ತಿನಲ್ಲಿ ಯಾರೂ ಇಲ್ಲ .ಅದು ದೇವ ದೇವತೆಗಳನ್ನೇ ಬಿಟ್ಟಿಲ್ಲ.
ತಪ್ಪುಗಳು ತಾನಾಗೆ ಬರುವದಿಲ್ಲ ನಾವೇ ಮಾಡಿದಾಗ ಆಗುತ್ತವೆ. ತಪ್ಪುಗಳು ಮಾನವನೋಂದಿಗೆ ಚರ್ಮದಂತೆ ಅಂಟಿ ಕೊಂಡಿವೆ .ತಪ್ಪುಗಳು ನಮ್ಮಷ್ಟಕ್ಕೆ ನಮ್ಮಗೆ ಗಮನಕ್ಕೆ ಬರಬಹುದು.ಒಂದೋಂದು ಸಲ ಇತರರ ಮೂಲಕ ನಾವು ಮಾಡಿದ ತಪ್ಪು ಅರಿವಾಗಬಹುದು.ಒಂದು ಚಿಕ್ಕ ತಪ್ಪಿನಿಮದ ಜೀವಮಾನ ಸಾಧೀಸಲಾಗದ್ದನ್ನು ಕೇಲವೇ ಕ್ಷಣಗಳಲ್ಲಿ ಸಾಧೀಸಬಹುದು.ಒಮ್ಮೋಮ್ಮೇ ಅದೇಷ್ಟೋ ವರ್ಷಗಳಿಂದ ಸಾಧಿಸಿಕೋಂಡು ಬಂದಿದ್ದನ್ನು ಕೇಲವೆ ಕ್ಷಣಗಳಲ್ಲಿ
ಕಳೇದುಕೋಳ್ಲಬಹುದು. ತಪ್ಪು ದ್ವಿ- ಮುಖ ಹೋಂದಿದೆ .ಅಲ್ಲದೆ ಅದು ಬಡಿದಂತೆ ಬಗ್ಗುತ್ತಾ ಹೋಗಿ ಕೊಡಲಿ ಆಗಬಹುದು,ಕೋಲಾರ ಚಿನ್ನವೂ ಆಗಬಹುದು.ತಪ್ಪು ಮಾಡುವದರಿಂದ ನಮ್ಮಷ್ಟಕ್ಕೆ ನಾವೇ ಹಾನಿಗೋಳಗಾಗಬಹುದು ಇಲ್ಲವೇ ಅದರಿಂದ ಇನ್ನೂಬ್ಬರಿಗೆ ತೋಂದರೆಯಾಗಬಹುದು. ಅದು ಪರಿಸ್ಥಿತಿ ಪರಸರ ಸಂದರ್ಭದೋಡನೆ ಬೆಸೆದುಕೋಂಡು ಬಂದಿದೆ. ತಪ್ಪು ದೊಡ್ಡದು ಆಗಿರಬಹುದು ,ಚಿಕ್ಕದು ಆಗಿರಬಹುದು ಇಲ್ಲವೇ ಇವೇರಡರ ಮದ್ಯದಲ್ಲಿಯೋ ಸಂಭವಿಸಬಹುದು.
ಒಬ್ಬ ಭಿಕ್ಷುಕನಿಂದ ಹಿಡಿದು ಉನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿ ಪ್ರಧಾನಮಂತ್ರಿಯರನ್ನೋಳಗೋಂಡು ಪ್ರಾಣಿ ಪಕ್ಷಿಗಳಂತಹ ಸಕಲ ಜೀವರಾಶಿಗಳಲ್ಲಿಯೊ ತಪ್ಪುಗಳು ಉಂಟಾಗುತ್ತವೆ .ಆದರೆ ತಪ್ಪುಗಳು ಹೆಚ್ಚಾಗಿ ಮಾನವನೆ ಮಾಡುತ್ತಾನೆ.ಅದು ಅವನ ಮೂಲ ಆಸ್ತೀಯು ಹೌದು. ನಾನು ಸರಿಯಾದುದ್ದನ್ನೇ ಮಾಡುತ್ತೇನೆಂದರೆ ಸಾದ್ಯವಿಲ್ಲ. ತಪ್ಪುಗಳು ಮಾನವನ ಸರಿಯಾದುದೆಡೆ ಕೋಂಡೋಯ್ಯೋತ್ತವೆ .ಅಂತಹ ಸಂದರ್ಭಗಳು ವಿರಳ.
ತಪ್ಪು ಸರಿ ಒಂದೆ ನಾಣ್ಯದ ಎರಡು ಹೂವುಗಳಿದ್ದಂತೆ ತಪ್ಪಾದಾಗ ಎಲ್ಲಿ ತಪ್ಪಾಯಿತು ಎಂದು ವಿಚಾರಿಸಿ ಅದನ್ನು ತಿದ್ದಿಕೋಳ್ಳುವದು ಸಾದ್ಯವಾದ ಮಟ್ಟಿಗೆ ಪ್ರಯತ್ನಿಸಬೇಕು.ತಪ್ಪುಗಳ ಕಡೆಗೆ ಗಮನ ಹರಿಸದೇ ತಪ್ಪು ಮಾಡುತ್ತಲೇ ಹೋಗಬಾರದು .ಇದನ್ನೆ ಕವಿಯೋಬ್ಬ ಹಾಡಿ ಹೋಗಳಿದ್ದು ಹೀಗೆ ''ತಪ್ಪು ಮಾಡೋದು ಸಹಜಾಕಣೋ ತಿದ್ದಿ ನಡೆಯೊದು ಮನುಜಾಕಣೋ..."
ಹೌದು ಈ ಮಾತು ಸರಿಯಾಗೆ ಇದೆ . ತಪ್ಪು ಮಾಡಿದೆನೇಂದು ಅದನ್ನು ದೊಡ್ಡದಾಗಿ ಮಾರ್ಪಡಿಸದೆ ತಪ್ಪುಗಳನ್ನು ಸಮತೋಲನದಿಂದ ಅಳೆದು ನೋಡಿ ಸರಿಪಡಿಸಿಕೋಳ್ಳುವದು ಒಳಿತು .ತಪ್ಪಿಲ್ಲದ್ದನ್ನು ತಪ್ಪುತಪ್ಪಾಗಿ ತಿಳಿದು ಕೋಳ್ಳುವದು ಮಹಾನ ತಪ್ಪು. ತಪ್ಪು ಮಾಡಿದಾಗ ಯಾರೆ ಆಗಲಿ ತಪ್ಪಿನ ಒಳಿತು ಕೆಡಕಗಳನ್ನು ವಿಚಾರಿಸಿ ಒಂದು ಸೂಕ್ತ ನಿರ್ಧಾರ ತೆಗೆದುಕೋಂಡು ತೂಕವುಳ್ಳ ಸಲಹೆ ನೀಡಬೇಕು ಮತ್ತು ಸಾಧ್ಯವಾದ ಮಟ್ಟಿಗೆ ಸರಿಪಡಿಸಿಳ್ಳಲು ತಿಸಿಸಬೇಕು,.
ಹೀಗೆ ಮಾಡುವದು ತಪ್ಪೆನಿಲ್ಲ ಆದರೆ ಅವನುಸಮಯ ಸಂದರ್ಭ ನೋಡಿ ವರ್ತಿಸಬೇಕು ಅಷ್ಟೇ.ತಪ್ಪು ಮಾಡದಾಗ ಒಂದೋಂದು ಸಲ ಕ್ಷಮೀಸಬೇಕು .ತಪ್ಪು ಮಾಡಿದ ವ್ಯಕ್ತಿ ತನ್ನ ತಪ್ಪುಗಳ ಬಗ್ಗೆ ಎಚ್ಚರಗೋಂಡಾಗ ಮಾತ್ರ. ಒಮ್ಮೋಮ್ಮೇ ತಪ್ಪು ತಪ್ಪಾಗಿ ತೀಳಿದುಕೋಳ್ಳುವದು ತಪ್ಪೇ. ಅದೇನೇ ಇರಲಿ ಇಷ್ಟೇಲ್ಲಾ ಹೇಳುತ್ತಿರುವ ನಾನು ಈ ಲೇಖನ ಬರೆಯುವದರಲ್ಲಿ ಒಂದಿಷ್ಟು ತಪ್ಪ ತಪ್ಪಾಗಿ ವ್ಯಾಖ್ಯಾನಿಸಿರಬಹುದು. ಅದನ್ನು ತಪ್ಪಾಗಿ ತಿಳಿದುಕೋಳ್ಳದೆ ಸರಿಪಡಿಸಿಕೋಳ್ಳಿ .ತಪ್ಪು ಮಾಡೋದು ಮಾನವನ ಸಹಜ ಗುಣ.

ಬುಧವಾರ, ಆಗಸ್ಟ್ 24, 2011

ನಿನ್ನ ಪ್ರೀತಿಸಲು ಕಲಿತ ಹೃದಯಕ್ಕೆ ಮರೆಯುವ ಹಾದಿ ಗೊತ್ತಿಲ್ಲ..!!

ನಿನ್ನ ಸಣ್ಣ ಮುಗುಳು ನಗೆಯಲ್ಲಿ
ಪ್ರೀತಿಯನ್ನು ನೋಡಲು ಕಲಿತ ಈ ಮನ,
ಅದರ ಹಿಂದಿದ್ದ ನೋವನ್ನು
ಸಹಿಸಿಕೊಳ್ಳಲು ಏಕೆ ಕಲಿಯಲಿಲ್ಲ???
ನನ್ನನ್ನೇ ನಾನು ಮರೆಯುವಷ್ಟು
ನಿನ್ನ ಪ್ರೀತಿಸಲು ಕಲಿತ ಈ ಹೃದಯ,
ನಿನ್ನ ಮರೆಯುವ
ಕನಸನ್ನೂ ಏಕೆ ಕಾಣಲಿಲ್ಲ??
ಈ ನನ್ನೆಲ್ಲ ಹುಚ್ಚು ಪ್ರಶ್ನೆಗಳಿಗೆ
ನೀನೆಂದು ಉತ್ತರಿಸುವುದಿಲ್ಲವೆಂದು ತಿಳಿದಿದ್ದರೂ,
ನಿನ್ನ ಆ ಮೌನದಲ್ಲೇ
ನನ್ನ ಒಲವನ್ನು ನಿರೀಕ್ಷಿಸುತ್ತ
ಪ್ರಶ್ನೆಯನ್ನೇ ಏಕೆ ಮರೆತೆ?
ಏಕೆಂದರೆ ನನಸಾಗದ ಕನಸಿಗೆ
ಹಗಲಲ್ಲೂ ಕನಸು ಕಾಣುತ್ತಿರುವ ಪೆದ್ದಿ ನಾನು....

[ ರಚನೆ: ರಶ್ಮೀ ದೇವನಹಳ್ಳಿ  , ಸ್ಪೇಷೆಲ್ ಥ್ಯಾಂಕ್ಸ ಟು" ಪ್ರೀತಿ v/s ನೋವು..!!" ಕಮ್ಯೂನಿಟ್  ]

ಮಂಗಳವಾರ, ಆಗಸ್ಟ್ 2, 2011

ಇದು ನಿಮ್ಮಗೆ ಗೋತ್ತಿರಲಿ ಅಂತಾ..!!!


ಅಸಲಿಗೆ
ಆ..ಚುಕ್ಕಿ-ತಾರೆಗಳು
ಮಿನುಗುವದೇ
ಇಲ್ಲ..!!
ಅವೆಲ್ಲ್ಲಾ
ನಿನ್ನ
ಹೊಳಪು ಕಂಗಳ
ಪ್ರತಿಫಲನವಷ್ಟೇ...!!

ಭಾನುವಾರ, ಜುಲೈ 31, 2011

ಅವಳ ಸುಳಿವಿಗೆ ಎರಡು ಸಾಕ್ಷಿಗಳು..!!

ಆ..ಹುಡುಗಿ
ಇಲ್ಲೇ ಹಾದು ಹೋಗಿದ್ದಾಳೆ
ಸುಳಿವು ಬೇಕೆ ..?
ಅದೋ ಅಲ್ಲಿ ನೋಡಿ
ಅವಳ
ಹೆಜ್ಜೆಯ ನೀನಾದಕ್ಕೆ
ನಿದ್ದೆ ಹೋದ
ಆ..ಕಲ್ಲುಗಳು
ಇನ್ನೂ ಎದ್ದಿಯೇ ಇಲ್ಲ.!
ಬೇಕಿದ್ದರೆ
ಸ್ವಲ್ಪು ಗಮನಿಸಿ ನೋಡಿ
ಆ..ಅಲ್ಲಿ
ನಿಂತಲ್ಲಿಯೇ ನಿಂತು
ತುಕಡಿಸುತ್ತಿರುವಂತೆ ಕಾಣುತ್ತಿರುವ
ಆ..ಗಿಡ-ಹೂ-ಬಳ್ಳಿಗಳು
ಅವಳ ಕೈಯ
ಬಳೆಗಳ ಮಧುರ ಲಯಕ್ಕೆ
ಸೋತು
ಇನ್ನೂ ತಲೆ ಹಾಕುತ್ತಲೆ ಇವೆ.

ಶುಕ್ರವಾರ, ಜೂನ್ 24, 2011

ನಾ ನಿನ್ನೋಳಗಿನ ಬೆಚ್ಚನೆಯ ಉಸಿರಾಗುವೆ.!!

ಇನಿಯಾ
ನೀ ಅಪ್ಪಿಕೊಳ್ಳುವೆಯಾದರೆ
ನಾ ನಿನ್ನೋಳಗಿನ
ಬೆಚ್ಚನೆಯ ಉಸಿರಾಗುವೆ,
ನೀ ಸಿಹಿ ಮುತ್ತೋಂದು
 ಕೇಳುವೆಯಾದರೆ
ನನ್ನ ತುಟಿಗಳಿಂದ
ನಿನ್ನ ಕೆನ್ನೆಯ ರಂಗೇರಿಸುವೆ,
ನೀ ನನ್ನ ಕನಸಲಿ
ಕಾಣಲು ಇಚ್ಚಿಸುವೆಯಾದರೆ
ನಿನ್ನ ಕಣ್ಣೋಳಗೆ
ಚಿತ್ರವಾಗಿ ಬಿಂಬಿಸುವೆ ,
ನಾ ನಿನ್ನೋಂದಿಗಿಲ್ಲವೆಂದು
ಚಿಂತಿಸುವೆಯಾದರೆ  
ನಿನ್ನ ಮುಂದೆ
ಕಾಮನ ಬಿಲ್ಲಾಗಿ ಗೋಚರಿಸುವೆ....!!
{ಸಾಹಿತ್ಯ : ಯಶು.
ಟಿ.ನರಸಿಂಹಪುರ}
Blog : http://www.yeshu-kanasu.blogspot.com/


ಬುಧವಾರ, ಮೇ 18, 2011

ಸುಳ್ಳಲ್ಲ ನಿಜವಾಗಲೂ..!!

ಒಂದೊಂದು ಸಲ
ಅಲ್ಲ ಪ್ರತಿ ದಿನ ಬೆಳ್ಳಿಗೆ
ನಿನ್ನನ್ನ ನಿನ್ನ
ಹಾಗೇನೆ
ತೋರಿಸೋಕೆ ಎಲ್ಲಿ
ಆಗಲ್ಲವೋ ಎಂಬ
ಭಯ ಆ..ಕನ್ನಡಿಗೆ.

ಮಂಗಳವಾರ, ಏಪ್ರಿಲ್ 19, 2011

ಆ..ಸೂರ್ಯನೆ..!!

ಯಾರೂ
ಹೇಳಿದರೂ ಕಣೆ
ನೀನು ಸೂರ್ಯನಿಗೆ
ಕರಗಿ ಗಿರಗಿ ಹೋಗಿಯಾ ಅಂತ ;
ಆ..ಸೂರ್ಯನೆ
ನಿನ್ನ ಮುಗಳ್ನಗೆಯ
 ಸೊಗಸಿಗೆ
ಕರಗಿ ಹೊಗಿರುವಾಗ
ನಿನ್ನೆ..!!









ಭಾನುವಾರ, ಏಪ್ರಿಲ್ 3, 2011

ಶನಿವಾರ, ಏಪ್ರಿಲ್ 2, 2011

ನೀನು ಹಾಗೆ ಖುಷಿ ಖುಷಿಯಾಗಿರಬೇಕು ಪ್ರೇಂಡ್..!!

ನೀನು
ಯಾವಾಗಲೂ
ನನ್ನ ಜತೇನೆ
ಇರೋ ಉಸಿರಾಗಬೇಡ..!!
ಯಾಕೆಂದರೆ
ನನಗೆ
ದು:ಖ ಆದಾಗಲೆಲ್ಲ
ನಿನಗೂ ಕೂಡಾ
ದು:ಖ ಆಗೋದು ಬೇಡ.. !! 

ಸೋಮವಾರ, ಮಾರ್ಚ್ 28, 2011

ನೀನು ಸಿಗುವ ಮುಂಚೆ..!!

-1-

ಆ..
ಕಪ್ಪು-ಬಿಳುಪು
ಕಾಲದ
ಬಣ್ಣ ಬಣ್ಣದ
ಕಾಮನಬಿಲ್ಲು
ನೀನು..!!

-2-

ನಿಂಗೆ
ಇಷ್ಟ
ಆಗೀರೋ..
ಸಾಂಗು
ನಂಗೂ
ಇಷ್ಟಾ
ಆದರೆ
ಅದು ಸುರುವಾತೆಂತಲೇ ಅರ್ಥ..!!

-3-

ನೀನು
ಸಿಗುವ ಮುಂಚೆ
ನಾನು ಬರಿ
ನಾನು;
ನೀನು
ಸಿಕ್ಕ ನಂತರ,
ನಿಂಗೆ
ಪ್ರೇಮಿ..!!
ಇನ್ನೂಬ್ಬರಿಗೆ
ಹುಚ್ಚ...!!
ಮತ್ತೋಬ್ಬರಿಗೆ
ಮತ್ತೆ ಎನೋ..!!

-4-
ನೀನು
 ಕ[ಳಿ]ಲಿಸಿದ ,
ನಂಗೆ
ತುಂಬಾನೆ
ಇಷ್ಟ ಆಗಿರೋ ,   
ಮುದ್ದಾದ ಕವಿತೆ
ಆಯ್ ಲವ್ ಯು..!!

ಭಾನುವಾರ, ಫೆಬ್ರವರಿ 27, 2011

ಒಂದು ಕ್ಷಣದ ಸತ್ಯ..!!

--1--

ಹೂಗಳಿಗೆ ಮುತ್ತಿಟ್ಟು
ಇಬ್ಬನಿಯ ಕದ್ದಿದ್ದ
ಈಗವನ ಗುರಿ
ನನ್ನ ಕೆಂಪು ಕೆನ್ನೆಗಳು!

[ ಸಾಹಿತ್ಯ : ರೂಪಾಶ್ರೀ
http://www.naduve.blogspot.com/]



--2--
ನಿನ್ನ
ಆಧರದ ಮೇಲೆ
ಕುಳಿತ ದುಂಬಿ
ಮೋಸ
ಹೊಗಿತ್ತು
ಹೂವೆಂದು ನಂಬಿ..!!

[ಸಾಹಿತ್ಯ :ಸಂಗಮೇಶ .ಮುದರಡ್ಡಿ ]




--3--

ಒಂದು
ಕ್ಷಣದ ಸತ್ಯ
ನಾ ನಿನ್ನ ಪ್ರೀತಿಸ್ತಿನಿ
ಅನ್ನೋದು.!!?

[ಚಿತ್ರ ಕೃಪೆ : ಸೌಮ್ಯ ಭಾಗವತ , http://www.swatimale.blogspot.com/]

ಶನಿವಾರ, ಫೆಬ್ರವರಿ 19, 2011

ಒಂದು ಮುದ್ದಾದ ವಂಚನೆ..!!

ಸುಂದರವಾಗಿರೊದನ್ನ
ತುಂಬಾನೇ
ಸುಂದರವಾಗಿದೆ
ಅಂತ ಹೇಳಬಹುದು ಏನೆ ;
ಆದರೆ
ತುಂಬಾನೇ
ಸುಂದರವಾಗಿರೊದನ್ನ
ವರ್ಣಿಸೋದಕ್ಕೆ ಶಬ್ದಗಳೇ ಇಲ್ಲ
ಅನ್ನೋದು ಎಂತಹ ವಂಚನೆ..!!

ಗುರುವಾರ, ಫೆಬ್ರವರಿ 17, 2011

ಒಂದು ಮುದ್ದಾದ ಲವ್ ಲೇಟರ್,,!!

 ಮಾತಲ್ಲಿ                                            
ಹೇಳಲಾಗದ್ದು..,                                  
ಮೌನದಲ್ಲಿ
ಅಕ್ಷರವಾದಾಗ...
ಪ್ರೀತಿಯಲ್ಲಿ
ಅದ್ದಿ ತೆಗೆದದ್ದು
`ಮೌನರಾಗ` ವೆಂಬ ಬ್ಲಾಗ..!!










[ಬ್ಲಾಗದ ಒಡತಿ  : ಸುಷ್ಮಾ
ಬ್ಲಾಗ ಅಡ್ರೇಸ್  : http://rutugaana.blogspot.com/ ]  

ಮಂಗಳವಾರ, ಫೆಬ್ರವರಿ 8, 2011

ಪ್ರೀತಿ ಎಂದರೆ..?

--1--

ಪ್ರೀತಿ ಎಂದರೆ
ಪ್ರೀತಿಯಿಂದ
ಪ್ರೀತಿಗಾಗಿ
ಪ್ರೀತಿಗೋಸ್ಕರ
ಪ್ರೀತಿಸುವದೇ
ಪ್ರೀತಿ..!!

--2--

ಸಾಯದೆ
ಸಾಯಿಸುವ
ಸಿಹಿಯಾದ
ವಿಷ..!!


--3--

ನೀನು
ಮತ್ತು
ನೀನು ಅಷ್ಟೇ..!!

--4--

ದೂರ ದೂರ
ಹೊದಂತೆ
ತೆವಳಿಸುವ ;
ಹತ್ತಿರವಿದ್ದಾಗ
ಮೈ ಮರೆಸಿ ನಿಲ್ಲುವ
"ಬೆಬರಸಿ"..!!



ಮಂಗಳವಾರ, ಫೆಬ್ರವರಿ 1, 2011

ಆಚೆ ಹೊಗದಿರೆ ...!!

ನಿನ್ನ
ಹೆಜ್ಜೆಯ ಗೆಜ್ಜೆ
ಸದ್ದನ್ನು ಕದ್ದು
ಕೇಳಲು
ಕಾಲೇಜ್
ಹುಡುಗರು
ಸಾಲು ಗೀಲು
ಹಚ್ಚಿಕೊಂಡಾರು..!!
ಪ್ಲೀಜ್
ಆಚೆ
ಹೊಗದಿರೆ ;
ಪಾಪ
ಓದೋ
ಹುಡುಗರು
 ಪಾಠ ಬಿಟ್ಟು ಹಾಳಾಗಿ
ಹೊಗಿಯಾರು..!!

ಭಾನುವಾರ, ಜನವರಿ 30, 2011

ಪ್ಲೀಜ್ ಇನ್ನೊಂದು ಸಲ...

ನಿನ್ನೆ
ಕಡಲ
ಕಿನಾರೆಯಲ್ಲಿ
ಒಂದು
ಸಣ್ಣ ವಾಕ್ ಗೆಂದು
ಬಂದವಳಿಗೆ
ಮೊಹಕ
ಕಣ್ಣೋಟದಿಂದ
ಅದೇನ
ಹೇಳಿದೆಯೊ
ಅನ್ನೊದು ಇಂದು
ಮರೆತು ಹೊಗಿದೆ ಕಣೋ
ಪ್ಲೀಜ್ ಇನ್ನೊಂದು ಸಲ...
ಹೆಳುವೆಯಾ...?

ಸೋಮವಾರ, ಜನವರಿ 24, 2011

ಮಳೆ ಹನಿಗಳನ್ನು ಸ್ವಚ್ಛ ಮಾಡಲು ...!!

ಭುವಿಗೆ
ಮುಟ್ಟುವ
ಮುಂಚಿನ
ಮಳೆ ಹನಿಗಳನ್ನು
ಸ್ವಚ್ಛ ಮಾಡಲು
ಎನು ಮಾಡಬೇಕು
ಗೋತ್ತೆ..?
ನಿನ್ನ
ಮೋಹಕ
ಕಣ್ಣೋಟದಿಂದ
ತೋಳೆದು
ಬಿಡಬೇಕು..!!


ಸೋಮವಾರ, ಜನವರಿ 17, 2011

ನೀನು ಒಮ್ಮೆ...

ನೀನು ಒಮ್ಮೆ
ಸೌಂದರ್ಯದ ತುಣುಕು
ಮತ್ತೊಮ್ಮೆ ಕನಸಿನ ಸೆಳಕು
ಮಗದೊಮ್ಮೆ ನೆನಪ ಸಾಲು ಬೇಳಕು
ನೀ ಎನೂ ಅಲ್ಲ ಅಂದ ಮರುಕ್ಷಣವೇ
ನೀನೇ ನನ್ನ ಬದುಕು..!!

ಶುಕ್ರವಾರ, ಜನವರಿ 14, 2011

ಒಂದು ಉದಾಹರಣೆ ಎಂದರೆ ನೀನೇ..!!!.

ಒಂದಿಷ್ಟು
ಕನಸುಗಳು
ಅದೆಷ್ಟು
ಸುಂದರವಾಗಿರುತ್ತವೆಂದರೆ
ಅವುಗಳನ್ನೆ
ಪದೇ ಪದೇ
ಕಾಣಲು
ಹಟ ಹಿಡಿದು ಬಿಡುತ್ತವೆ
ನನ್ನ ಕಣ್ಗಳು ;
ಅಂತವುಗಳಿಗೆ
ಒಂದು ಉದಾಹರಣೆ
ಎಂದರೆ ನೀನೇ..!!!.



ಗುರುವಾರ, ಜನವರಿ 13, 2011

ನಿಮ್ಮ ಪಯಣ..


 ಇಂತಿ ನಿಮ್ಮ ಪ್ರೀತಿಯ ಕಡೆಗೆ ಸಾಗಲಿ..!!ಹಾಗಾದರೆ ಮತ್ತೆಕೆ ತಡ ಇಲ್ಲಿ ಕ್ಲೀಕ್ ಮಾಡಿ .  http://www.kingprabhi.blogspot.com/

ಶುಕ್ರವಾರ, ಜನವರಿ 7, 2011

ನಾ ಕವಿ ಅಲ್ಲವೇ ಅಲ್ಲ ಗೆಳತಿ

ನಾ ಕವಿ ಅಲ್ಲವೇ ಅಲ್ಲ ಗೆಳತಿ

ಎಲ್ಲಾ ಕೃತಿಚೌರ್ಯ…

ನಿನ್ನ ಕಂಗಳಿಂದ ಹೆಕ್ಕಿದ ಪ್ರೀತಿಯ ಸಾಲುಗಳೇ

ನನ್ನ ಕಾವ್ಯ !!


[ '' ಮನಸಿನ ಮರ್ಮರ ''ಎಂಬ ಬ್ಲಾಗ್ ನಡೆಸುತ್ತಿರುವ ವಿಜಯರಾಜ್ ಕನ್ನಂತ ಅವರು ಬರೆದ ಕವಿತೆ ಇದು.
 ನನಗೆ ತುಂಭಾ ಇಷ್ಟಾ ಆಗಿದ್ದರಿಂದ ವಿಜಯರಾಜ್  ಅವರ ಅನುಮತಿಯಿಲ್ಲದೆ ನನ್ನ ಬ್ಲಾಗ್ ನಲ್ಲಿ ಹಾಕುತ್ತಿರುದಕ್ಕೆ
ಕ್ಷೇಮೆ ಇರಲಿ ..!! ಅಂತ ಅವರಲ್ಲಿ ವಿನಂತಿಸುತ್ತಿದ್ದೆನೆ.'' ]

ಶುಕ್ರವಾರ, ಡಿಸೆಂಬರ್ 31, 2010

ಭಾನುವಾರ, ಡಿಸೆಂಬರ್ 26, 2010

ನಾನು, ಅವಳು, ಗುಲಾಬಿ, ಸೂರ್ಯ ಮತ್ತು ಪ್ರೀತಿ..!!!!

ಜಸ್ಟ್
ನಿನಗೆ
ಕೋಡೊನ ಅಂತ
ಇಮ್ಯಾಜಿನ್
ಮಾಡಿಕೊಂಡರೇನೆ ಸಾಕು
ಆ..ಕೆಂಪು ಗುಲಾಬಿ ಹೂ
ಬಾಡುವದನ್ನೆ
ಮರೆತು ಬಿಡುತ್ತೆ...!!!

ಇನ್ನೂ
ಕೊಟ್ಟು ಬಿಟ್ಟರೆ
ನಿನ್ನ ಪ್ರೀತಿಗಾಗಿ
ತನ್ನನ್ನು ಬಾಡಿಸಲು
ಬರುವ ಸೂರ್ಯನನ್ನು
ಎಲ್ಲಿ ಕೊಂದು
ಈ ಜಗತ್ತನ್ನು ಕತ್ತಲು
ಮಾಡುತ್ತೋ
ಎಂಬುದೆ ನಂಗೆ ಚಿಂತೆ..!!

ಬುಧವಾರ, ಡಿಸೆಂಬರ್ 15, 2010

ಒಟ್ಟಾರೆ ನಿನ್ನ ಜೊತೆಗಿರಬೇಕೆಂದರೆ..!!!

ನಾನು ಆ
ತಂಗಾಳಿಯಾದರೂ
ಆಗಬೇಕು ಕಣೆ;
ಯಾಕೆಂದರೆ
ಬೇಕೆಂದಾಗಲೆಲ್ಲ
ನಿನ್ನ
ಹಿಂದೆ-ಮುಂದೆನೇ
ಸುಳಿದಾಡಿಕೊಂಡು
ಹಾಯಾಗಿ
ಪ್ರೀತಿಸಿಕೊಂಡಿರಬಹುದು
ಸುಮ್ಮನೆ..!!

ಶುಕ್ರವಾರ, ಡಿಸೆಂಬರ್ 3, 2010

ನೀನು ಬೆಳದಿಂಗಳ ಬಾಲೆ ಎನೋ ನಿಜ..!!

ನೀನು                                                                       
ಬೆಳದಿಂಗಳ
ಬಾಲೆ..!!
ನಿನ್ನ ಕಂಡರೆ                  
ಎಲ್ಲರಿಗೂ
ಅಕ್ಕರೆ ಸಕ್ಕರೆ;                                                       
ಆದರೆ
ಆ ಕತ್ತಲು
ನಿನ್ನ ಕಂಡರೆ
ಹಾಗೇಕೆ ಓಡುತ್ತೆ
ದೂರ..!!      
                                                       

ಸೋಮವಾರ, ನವೆಂಬರ್ 15, 2010

ಮುದ್ದು ಕನಸೇ ನೀನು ಬಿದ್ದು..!!

ನೀನು
ಬಿದ್ದು
ಗಾಯ ಮಾಡಿಕೊಂಡು
ಚಳಿಗೆ ನಡುಗಬಾರದೆಂದು
ಗಾದೆ ಹಾಸಿ
ಉಪಚರಿಸಿದ್ದೆ ತಪ್ಪಾಯಿತೆನೋ.!!
ಅಂತ ಅನಸ್ತಿದೆ ನಂಗೆ
ಯಾಕೆಂದರೆ
ನನ್ನವನನ್ನೆ ನನ್ನ
ಹತ್ತಿರಕ್ಕೆ ಬಿಡುತ್ತಿಲ್ಲ
ನೀನು

ಶುಕ್ರವಾರ, ನವೆಂಬರ್ 12, 2010

ಪ್ರೀತಿಯ ಹನಿಗಳು..!!

--1--
ಪ್ರತಿ
ದಿನ
ನೀನು
ನನ್ನ ಹತ್ತಿರಕ್ಕೆ
ಇರಲಿಕ್ಕೆ ಆಗುದಿಲ್ಲೇಂದೆ
ನೆನಪನ್ನು
ಸೃಷ್ಟಿ ಮಾಡಿದನೇನೋ..
ಆ..ದೇವರು..!!

--2--
ನಿನ್ನ
ಕಣ್ಸೇಳತಕ್ಕೆ
ಸಿಕ್ಕ ನನ್ನನ್ನು
ಕಂಡು
ಆ..ಅಯಸ್ಕಾಂತಕ್ಕೂ
ನಿದ್ದೆ ಹೊರಟು
ಹೋಗಿದೆ..!!

ಭಾನುವಾರ, ನವೆಂಬರ್ 7, 2010

ಒಂದು ಪುಟ್ಟ ವಿನಂತಿ..!!

ದೂರೇ
ಇದ್ದುಕೊಂಡು
ಕಣ್ಮನಗಳಿಗೆ ತಂಪು
ನೀಡುವ
ಚುಕ್ಕಿ-ತಾರೆಗಳೇ
ಅಲ್ಲೇ ಇದ್ದು ಎನ್
 ಉಪಯೊಗವಿಲ್ಲ..!!
ಈ ದಿನಕ್ಕೆ;
ಯಾಕೆಂದರೆ
ನನ್ನ ಗೆಳತಿ
ಪುಟ್ಟ ಪ್ರೀತಿಗಾಗಿ
ಗೀಪ್ಟಾಗಿ ಕೊಡಬೇಕೆಂದು
ನಿಮ್ಮನ್ನು ಕೇಳಿದ್ದಾಳೆ
ಅದಕ್ಕೆ...!!

ಬುಧವಾರ, ಅಕ್ಟೋಬರ್ 27, 2010

ಹೆಸರು ಮರೆಯಬೇಕಿದೆ..!!

[ ಈ ಕವಿತೆ ನಂಗೆ ತುಂಭಾ ಇಷ್ಟವಾಯಿತು ಅದಕ್ಕೆ ಈ ಕವಿತೆಯನ್ನು ಸಾವಿರ ಕನಸಿನಲ್ಲಿ ಕವಿಯ ಅನುಮತಿ ಇಲ್ಲದೆ ಹಾಕುತ್ತಿದ್ದೆನೆ .ಕವಿತೆ ಬರೆದ ಕವಿಯ ಹೆಸರು ಸರಿಯಾಗಿ ನೆನಪಿಲ್ಲ ಅವರ ಹೆಸರು ಬಹುಶಃ ವಿ.ಭಟ್ಟ ಅಂತ ಇರಬೇಕು.ಅಪರೋಕ್ಷವಾಗಿ ಅನುಮತಿ ನೀಡಿದ ಕವಿಗೆ ಧನ್ಯವಾದಗಳು ]


ನೀನೊಲಿದರೆ ಕೊರಡು ಕೊನರುವದೆಂದು
ಹಗಲು ರಾತ್ರಿ ಕಾದಿದ್ದೆ
ಅದು ಗೆದ್ದಲು ಹಿಡಿದದ್ದು ಗೋತ್ತಾಗಲ್ಲಿಲ್ಲ


ನಿರೀಕ್ಷೆಯಲ್ಲಿ ಹಚ್ಚಿಟ್ಟ ಹೊಸ್ತಿಲ ದೀಪ
ಆಗಲೇ ನಂದಿರಬೇಕು, ಪ್ರೀತಿ ಕಳೆದ ಮೇಲೆ
ನವಿಲುಗರಿ ನೆಲಗುಡಿಸಲಿಕ್ಕೆ ಲಾಯಕ್ಕಲ್ಲವೇ..?


ಪ್ರೀತಿ ಪ್ರಣತಿಯಂಥದ್ದು ಎಂದಿದ್ದೆ ನೀನು
ಕರಗಿ ಉರಿದೆ ನೀನು
ನೀ ಮೈಯಷ್ಟೇ ಕಾಯಿಸಿಕೊಂಡೆ


ನಿನ್ನ ಬಗ್ಗೆ ಬರೆದ ಕವಿತೆಯ
ಮೊದಲ ಚರಣ ಗೆದ್ದಲು ತಿಂದಿದೆ
ಕವಿತೆಯ ಹೆಸರು-ಮರೆಯಬೇಕಿದೆ


ಕಳೆದು ಹೋದರೆ ಹೋಗಲೆಂದು ಬಿಸಾಡಿದ್ದ
ನೆನಪು ಮಾತ್ರ ಆಗಾಗ
ಮಂಚದ ಬಳಿ ಕಾಲಿಗೆ ಸಿಕ್ಕುತ್ತದೆ


ಪ್ರೀತಿಗೆ ನೆಪವಿಲ್ಲವೆಂದು
ಹೇಳಿದ್ದೆ ನೀನು, ನಂಬಿದ್ದೆ ನಾನು
ನೀ ಹೊಗಿದ್ದರ ಕಾರಣ ಕೇಳಿರಲಿಲ್ಲ


ಹುಚ್ಚ ಪ್ರೀತಿಯಲ್ಲಿ ಅಂದುಕೊಂಡಿದ್ದೆ
ಸತ್ತರೆ ಸಮಾಧಿ ನಿನ್ನ ಮನೆಯಿರುವ ಬೀದಿಯಲ್ಲಿ ಎಂದು
ಪುಣ್ಯಕ್ಕೆ ಅಲ್ಲಿ ಜಾಗವಿಲ್ಲ..!!

ಬುಧವಾರ, ಅಕ್ಟೋಬರ್ 13, 2010

ಮಿಸ್ ಕಾಲ್ ಆಗು..!!

ಬೇಕಾದರೆ
ನನಗೆಂದೇ ಬಂದು
ನನ್ನಲ್ಲೇ
ಉಳಿದು ಬಿಡುವ
ಕಾಲ್ ಇಲ್ಲವೇ ಮಿಸ್ ಕಾಲ್ ಆಗಲಿ
ನಿನ್ನ ಪ್ರೀತಿ
ಆದರೆ
ಗುಡ್ ಮಾರ್ನಿಂಗ್ ಗುಡ್ ನೈಟ್
ರೂಪ ಧರಿಸಿಕೊಂಡು ಬಂದು
ಬೇರೆ ಯಾರಿಗೋ
ಪಾರ್ವರ್ಡ ಆಗುವ ಮೇಸೇಜ್ ಮಾತ್ರ
ಆಗದಿರಲಿ..!!

ಸೋಮವಾರ, ಸೆಪ್ಟೆಂಬರ್ 27, 2010

ನೆನೆಪಾಗಿ

ಎಲ್ಲ
ಮರೆತರನೂ
ನೆನೆಪಾಗಿ
ಉಳಿಯುವೆ
ನೀನು

ಭಾನುವಾರ, ಸೆಪ್ಟೆಂಬರ್ 19, 2010

ತುಂಭಾ .! ಹಚ್ಚಿಕೊಳ್ಳುತ್ತಾರೆ.

ಹುಡುಗಿಯರು
ತುಂಭಾ ..!!
ಹಚ್ಚಿಕೊಳ್ಳುತ್ತಾರೆ..!!
ಹುಡುಗರನ್ನ ;
ತಮ್ಮ
ಹಣೆಯ ಮೇಲಿನ
ಬಿಂದಿಯಂತೆ.