--೧--
ಇಲ್ಲಿ
ಹುಡುಗಿಯರು
ಹುಟ್ಟಿಸುತ್ತಾರೆ
ಕವಿತೆಗಳನ್ನು;
ಇಲ್ಲಿ
ಅವರೇ ಅಪ್ಪ..!
ನಮ್ಮದೇನಿದ್ದರೂ
ಅಮ್ಮಂದಿರ ಕೇಲಸ
ಅದಕ್ಕೆ ಏನೊ
ಆ.. ಕವಿತೆಯು
ಅವರದೇ
ಪಡಿಯಚ್ಚು..!!
--೨--
ಇಲ್ಲಿ
ಸಕ್ಕರೆ ಖಾಲಿಯಾಗಿದೆ
ತಲೆ ನೋಯುತ್ತಿದೆ
ಈಗ
ಅದು ಇಲ್ಲಾ ಅಂದ್ರೆ
ಸತ್ತು ಹೋಗತ್ತಿನಿ;
ಪ್ಲೀಸ್
ಒಂದೇರಡು
ಸಿಹಿ ಮುತ್ತುಗಳನ್ನು
ತಗೋಂಡ ಬಾ
ಆಗಲ್ಲ ಅಂದ್ರೆ
ಪಾರ್ಸಲ್ ನಲ್ಲಾದರೂ
ಕಳಿಸಿಕೊಡು
ಡಿಕಾಶನ್
ಆರಿ ಹೋಗುವ ಮುನ್ನ
ಅವುಗಳನ್ನು ಬೇರೆಸಿ
ಚಾ ಕುಡಿಯಬೇಕು
ನಾನು
7 ಕಾಮೆಂಟ್ಗಳು:
ಹ ಹ ಹಾ ,ಈಗ ಸಕ್ಕರೆ ಖಾಲಿಯಾಗಿದೆ ಅಂತೀರಾ
ಜಾಸ್ತಿ ಆದರೆ ಸಕ್ಕರೆ ಖಾಯಿಲೆ ಅಂತೀರಾ!
ಸುಮ್ನೆ ತಮಾಷೆಗೆ ಕನಸು ಮೇಡಂ.ಸಿಟ್ಟಾಗಬೇಡಿ.
ಹ್ಹ ಹ್ಹ ಹ್ಹಾ.........
ಸಕ್ಕರೆ ಖಾಲಿಯಾದರೆ ಪಕ್ಕದ ಮನೆಯಿಲ್ವೆ?????????????
ಚಹಾಕ್ಕಾಗಿ ಸಿಹಿ ಮುತ್ತುಗಳನ್ನು ಬಳಸುತ್ತೀರಾ? ದುಬಾರಿಯಾದೀತು! :)
NICE
che... houdalvaa..... namma maneya sakkare samasye kadimeyaaytu.... thanks........
ಸಕ್ಕರೆ ಖಾಲಿಯಾದರೆ ಏನಾಯ್ತು,
ಪ್ರಿಯತಮನ ಅಕ್ಕರೆ ಇದ್ದರೆ ಸಾಕು
"ಕನಸು " ರವರೆ ನಮಸ್ಕಾರ.ನಿಮ್ಮಲ್ಲಿ ಕವಿತ್ವ ಸ್ವಾಭಾವಿಕವಾಗಿಯೇ ಮೈಗೂಡಿದೆ.ನಿಮ್ಮ ಎರಡು ಕವಿತೆಗಳನ್ನು ಓದಿದೆ.ಬಿಡುವು ಮಾಡಿಕೊಂಡು ಎಲ್ಲಾ ಕವಿತೆಗಳನ್ನೂ ಓದುತ್ತೇನೆ.ನೀವೂ ನನ್ನ ಬ್ಲಾಗಿಗೆ ಫಾಲೋಯರ್ ಆಗಿ.ಬೇರೆ ಬ್ಲಾಗುಗಳಿಗೆ ಭೇಟಿ ಕೊಡುತ್ತಿರಿ.ನಿಮ್ಮ ಕವಿತೆಗಳು ನಿಜಕ್ಕೂ ಚೆನ್ನಾಗಿದೆ.ನನ್ನದೊಂದು ಸಲಹೆ.ನೀವು ಎಷ್ಟು ಸಾಧ್ಯವೋ ಅಷ್ಟು ಖ್ಯಾತ ಸಾಹಿತಿಗಳ ಕೃತಿಗಳನ್ನೂ ಓದಿ.ನೀವು ಓದಿದಷ್ಟೂ ನಿಮ್ಮ ಬರಹ ನಿಮಗೆ ಅರಿವಿಲ್ಲದೆ ಸುಧಾರಿಸುತ್ತದೆ.ಧನ್ಯವಾದಗಳು.
my blog
www.nannavalaloka.blogspot.com
ಕಾಮೆಂಟ್ ಪೋಸ್ಟ್ ಮಾಡಿ