ಗುರುವಾರ, ಜೂನ್ 10, 2010

ತುಂಭಾ ಪ್ರೀತಿಸಬೇಡ ಕಣೋ..!!

--೧--
ಪ್ರೀತಿಯಲ್ಲಿ
ಬಿದ್ದೆ ;
ಎದ್ದು
ಇಚೆ
ಬರುವದರೊಳಗೆ
ಕೈಯಲ್ಲಿ
ನೂರಾರು
ಕವಿತೆಗಳಿದ್ದವು..!!
--೨--
ನನ್ನನ್ನ
ತುಂಭಾ
ಪ್ರೀತಿಸಬೇಡ
ಕಣೋ..!!
ನಾ
ನಿಂಗೆ
ಸಿಕ್ಕೋದು
ಇದೊಂದೆ
ಜನುಮ..!!

8 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ಚೆ೦ದದ ಗುಟುಕುಗಳು. ಎರಡು ಸುಪರ್ರ್!

ಮನದಾಳದಿಂದ............ ಹೇಳಿದರು...

ಚೆಂದದ ಚುಟುಕುಗಳು. ಎರಡನೆಯ ಚುಟುಕು ಯಾಕೋ ತುಂಬಾ ಇಷ್ಟ ಆಯ್ತು.

Dr.D.T.Krishna Murthy. ಹೇಳಿದರು...

1)ಪ್ರೀತಿಯ ಮಡುವಿನಲ್ಲಿ
ಬಿದ್ದಿದ್ದೀರಿ ------!
ಕವಿತೆಗಳ ಅಲೆಗಳು
ಏಳುತ್ತಿವೆ !
2)ಇರುವುದೊಂದೇ
ಜನುಮ!
ಅದಕ್ಕೇ
ಅಷ್ಟೊಂದು
ಪ್ರೀತಿ!

ಭಾಶೇ ಹೇಳಿದರು...

ಮುದ್ದಾಗಿವೆ ಎರಡೂ ಚುಟುಕಗಳು
ನೀವು ನಿಜವಾಗೂ ಪ್ರೀತಿಯಲ್ಲಿ ಬಿದ್ದಿದೀರ! ಈ ಚುಟುಕು ಓದಿ ಖಾತರಿಯಾಯಿತು

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) ಹೇಳಿದರು...

ನನ್ನನ್ನ
ತುಂಭಾ
ಪ್ರೀತಿಸು
ಕಣೋ..!!
ನಾ
ನಿಂಗೆ
ಸಿಕ್ಕೋದು
ಇದೊಂದೆ
ಜನುಮ..!!
ಎರಡು ಗುಟುಕು ಸೂಪರ್ ಕಣ್ರೀ...!

ಸಾಗರದಾಚೆಯ ಇಂಚರ ಹೇಳಿದರು...

ಕನಸು
ತುಂಬಾ ಪ್ರೀತಿಸ ಬೇಡವೋ ಅಂತ ಗೋಗರೆಯುವ ಮನಸಿನ ಪರಿ ಹಿಡಿಸಿತು

ದಿನಕರ ಮೊಗೇರ ಹೇಳಿದರು...

ಕನಸು,
ಸಿಹಿ ಸಿಹಿ ಕವನಗಳು...... ಪ್ರೀತಿ ಕಡಿಮೆ ಮಾಡಲು ಹೇಳಬೇಡಿ,
ಇರುವುದೊಂದೇ ಜನ್ಮ,
ಇನ್ನೂ ಪ್ರೀತಿ ಮಾಡೋ ನನ್ನ,

ಮನಸು ಹೇಳಿದರು...

nice