ಸೋಮವಾರ, ಜನವರಿ 19, 2009

ಖಾಲಿ ಕಣ್ಣಿನ ಕ್ಯಾನವಾಸಿನೋಳಗೆ...!!

ಬೆಂಗಾಡಿನ ತಂಗಾಳಿಯಲ್ಲಿ
ಸೋಂಯ್ಯೆನೆ ತೆಲಿ ಹೋದ
ಆ..ಗುಂಡು

ಕಣಿವೆಯ ದಾರಿಯ
ತಿರುವಿನಲ್ಲಿ ಮರೆಯಾದ
ನೀಲಿ ಕಂಗಳ ಹುಡುಗಿ

ನಿಶಬ್ದ ಮೌನದಲ್ಲಿ
ಶಬ್ಧಗಳ ಪೋಣಿಸುತ್ತ
ಕುಳಿತ ಯುವತಿ

ಬೇಕೆಂತಲೇ ಬಸ್ಸು
ತಪ್ಪಿಸಿಕೊಂಡ ಕಪ್ಪು
ಟೀ-ಶರ್ಟಿನ ಹುಡುಗ

ಪ್ರಶಾಂತವಾದ ಎದೆಯ
ಸರೋವರದಲ್ಲಿ ಮಧುರ
ಅಲೆಗಳನ್ನೆಬ್ಬಿಸಿ ಹೋದ ಚೆಲುವೆ

ಬಟ್ಟ ಬಯಲಲ್ಲಿ
ಬಿಟ್ಟ ಕಂಗಳಲ್ಲಿ ಒಂಟಿ
ಕಾಲಲ್ಲಿ ನಿಂತಿರುವ ಹುಚ್ಚ

ಹೌದು ..! ಆ ಅವರೇ
ನನ್ನ ಊಹೆ ನಿಜವಾಗುತ್ತಿದೆ

ನೀಲ ಗಗನದ ಆ..ತಾರೆ
ಹಾಗೆ ನನ್ನ ಕಣ್ಣ್ರೇಪ್ಪೆಯೋಳಗೆ
ಇಂದೇಕೋ ಮತ್ತೆ ಮತ್ತೆ
ನೆನಪಾಗುತ್ತಲೇ ಇದ್ದಾರೆ..!!
ಖಾಲಿ ಕಣ್ಣಿನ ಕ್ಯಾನವಾಸಿನೊಳಗೆ
ಚಿತ್ರವಾಗುತ್ತಲೆ ಇದ್ದಾರೆ.