Monday, August 30, 2010

ಚೂರು ಈ ಕಡೆ ಬಂದು ಹೋಗೆ..!!

ಟ್ರಿನ್ - ಟ್ರಿನ್ ರಿಂಗು
ಸಿನಿಮಾ ಸಾಂಗು - ಗಿಂಗು
ಕೇಳಿ ಕೇಳಿ ಬಹಳ ಬೇಜಾರು
ಅದಕ್ಕೆ
ನಮ್ಮ ಓಣಿಯ ಕಡೆ
ಬಂದು ಹೊಗು ಚೂರು
ನಿನ್ನ ಕಾಲ್ಗೆಜ್ಜೆಯ ನಾದವನ್ನು
ರಿಕಾರ್ಡ ಮಾಡಿಕೊಳ್ಳಬೇಕು ನಾನು
ಬಿಗಿ ಹಿಡಿದು ಉಸಿರು
ಬರಲೆಂದು
ಅದು
ತುಂಭಾ
ಕ್ಲಿಯರು..!!