Sunday, June 13, 2010

ಅದಿಲ್ಲ ಅಂದ್ರೆ ಸತ್ತೆ ಹೋಗತ್ತೆನಿ..!!

--೧--
ಇಲ್ಲಿ
ಹುಡುಗಿಯರು
ಹುಟ್ಟಿಸುತ್ತಾರೆ
ಕವಿತೆಗಳನ್ನು;
ಇಲ್ಲಿ
ಅವರೇ ಅಪ್ಪ..!
ನಮ್ಮದೇನಿದ್ದರೂ
ಅಮ್ಮಂದಿರ ಕೇಲಸ
ಅದಕ್ಕೆ ಏನೊ
ಆ.. ಕವಿತೆಯು
ಅವರದೇ
ಪಡಿಯಚ್ಚು..!!
--೨--
ಇಲ್ಲಿ
ಸಕ್ಕರೆ ಖಾಲಿಯಾಗಿದೆ
ತಲೆ ನೋಯುತ್ತಿದೆ
ಈಗ
ಅದು ಇಲ್ಲಾ ಅಂದ್ರೆ
ಸತ್ತು ಹೋಗತ್ತಿನಿ;
ಪ್ಲೀಸ್
ಒಂದೇರಡು
ಸಿಹಿ ಮುತ್ತುಗಳನ್ನು
ತಗೋಂಡ ಬಾ
ಆಗಲ್ಲ ಅಂದ್ರೆ
ಪಾರ್ಸಲ್ ನಲ್ಲಾದರೂ
ಕಳಿಸಿಕೊಡು
ಡಿಕಾಶನ್
ಆರಿ ಹೋಗುವ ಮುನ್ನ
ಅವುಗಳನ್ನು ಬೇರೆಸಿ
ಚಾ ಕುಡಿಯಬೇಕು
ನಾನು