Wednesday, February 25, 2009

ನನ್ನ ಕಣ್ಣುಗಳೇಕೊ ಅವಳ ದೋಸ್ತಿ ಮಾಡುತ್ತಿವೆ..!!

ಮೊನ್ನೆ ಸಂಜೇ
ಕಡಲ ಕಿನಾರೆಯ
ದಾರಿಯಲ್ಲಿ
ಜತೆ ಜತೆಯಾಗಿ
ಹೆಜ್ಜೆ ಹಾಕುವಾಗ
ಅಮ್ಮ ಮೇಲಗೆ ನುಡಿದಳು
"ಮಗು
ನಿನ್ನ ಕಣ್ಣುಗಳನ್ನು
ಹಾಗೆಲ್ಲಾ
ಒರಟು ಬೆರಳುಗಳಿಂದ ಉಜ್ಜಬೇಡ..!!
ನಿನ್ನ ಕಣ್ಣೋಳಗಿನ
ಮೋಹಕ ಕನಸಾದ
ಆ.. ಹೂವಿನಂಥ ಹುಡುಗಿಗೆ
ಗಾಯವಾದಿತು..!!"
ಸಾರಿ ಮಮ್ಮಿ
ಅಂದೆನಾದರೂ
" ನನ್ನ ಕಣ್ಣುಗಳೆಂಬ
ಪುಟ್ಟ ಜಗತ್ತಿನ ತುಂಬ
ನೀನೆ ಇರುವೆ "ಅಂತಾ ಸುಳ್ಳು ಹೇಳಿ
ಸತ್ಯ ಮುಚ್ಚಿಡಲಾಗಲಿಲ್ಲ..!!
ಯಾಕೆಂದರೆ
ಇತ್ತಿತ್ತಲಾಗಿ
ನನ್ನ ಕಣ್ಣುಗಳೇಕೊ
ಆ..ಮುದ್ದು ಹುಡುಗಿಯ
ದೋಸ್ತಿ ಮಾಡುತ್ತಿವೆ..!!