Saturday, December 27, 2008

ತಪ್ಪು ಮಾಡೋದು ಸಹಜಾ ಕಣೋ...!!


ತಪ್ಪು ಮಾಡೋದು ಮಾನವನ ಸಹಜ ಗುಣ.ಮಾನವ ಎಷ್ಟೆ ಬುದ್ದಿವಂತನಿದ್ದರೂ ಒಮ್ಮಿಲ್ಲಾ ಒಮ್ಮೆಯಾದರೂ ತಪ್ಪು ಮಾಡಿಯೇ ಮಾಡಿರುತ್ತಾನೆ .ಹೌದು ಅದಕ್ಕಾಗಿಯೇ" ತಪ್ಪುಮಾನವನ ಬಂಡವಾಳ " ಎಂದಿದ್ದಾರೆ. ತಪ್ಪುಗಳಿಂದಲೇ ಮಾನವ ಪರಿಪೂರ್ಣತೆ ಕಡೆಗೆ ನಡೆಯುತ್ತಾನೆ.ಹೌದು ಎನ್ನುತ್ತಾರೆ ತಜ್ಙರು.ತಪ್ಪುಗಳಿಂದ ತಪ್ಪಿಸಿಕೋಳ್ಳದವನು ಈ ಜಗತ್ತಿನಲ್ಲಿ ಯಾರೂ ಇಲ್ಲ .ಅದು ದೇವ ದೇವತೆಗಳನ್ನೇ ಬಿಟ್ಟಿಲ್ಲ.
ತಪ್ಪುಗಳು ತಾನಾಗೆ ಬರುವದಿಲ್ಲ ನಾವೇ ಮಾಡಿದಾಗ ಆಗುತ್ತವೆ. ತಪ್ಪುಗಳು ಮಾನವನೋಂದಿಗೆ ಚರ್ಮದಂತೆ ಅಂಟಿ ಕೊಂಡಿವೆ .ತಪ್ಪುಗಳು ನಮ್ಮಷ್ಟಕ್ಕೆ ನಮ್ಮಗೆ ಗಮನಕ್ಕೆ ಬರಬಹುದು.ಒಂದೋಂದು ಸಲ ಇತರರ ಮೂಲಕ ನಾವು ಮಾಡಿದ ತಪ್ಪು ಅರಿವಾಗಬಹುದು.ಒಂದು ಚಿಕ್ಕ ತಪ್ಪಿನಿಮದ ಜೀವಮಾನ ಸಾಧೀಸಲಾಗದ್ದನ್ನು ಕೇಲವೇ ಕ್ಷಣಗಳಲ್ಲಿ ಸಾಧೀಸಬಹುದು.ಒಮ್ಮೋಮ್ಮೇ ಅದೇಷ್ಟೋ ವರ್ಷಗಳಿಂದ ಸಾಧಿಸಿಕೋಂಡು ಬಂದಿದ್ದನ್ನು ಕೇಲವೆ ಕ್ಷಣಗಳಲ್ಲಿ
ಕಳೇದುಕೋಳ್ಲಬಹುದು. ತಪ್ಪು ದ್ವಿ- ಮುಖ ಹೋಂದಿದೆ .ಅಲ್ಲದೆ ಅದು ಬಡಿದಂತೆ ಬಗ್ಗುತ್ತಾ ಹೋಗಿ ಕೊಡಲಿ ಆಗಬಹುದು,ಕೋಲಾರ ಚಿನ್ನವೂ ಆಗಬಹುದು.ತಪ್ಪು ಮಾಡುವದರಿಂದ ನಮ್ಮಷ್ಟಕ್ಕೆ ನಾವೇ ಹಾನಿಗೋಳಗಾಗಬಹುದು ಇಲ್ಲವೇ ಅದರಿಂದ ಇನ್ನೂಬ್ಬರಿಗೆ ತೋಂದರೆಯಾಗಬಹುದು. ಅದು ಪರಿಸ್ಥಿತಿ ಪರಸರ ಸಂದರ್ಭದೋಡನೆ ಬೆಸೆದುಕೋಂಡು ಬಂದಿದೆ. ತಪ್ಪು ದೊಡ್ಡದು ಆಗಿರಬಹುದು ,ಚಿಕ್ಕದು ಆಗಿರಬಹುದು ಇಲ್ಲವೇ ಇವೇರಡರ ಮದ್ಯದಲ್ಲಿಯೋ ಸಂಭವಿಸಬಹುದು.
ಒಬ್ಬ ಭಿಕ್ಷುಕನಿಂದ ಹಿಡಿದು ಉನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿ ಪ್ರಧಾನಮಂತ್ರಿಯರನ್ನೋಳಗೋಂಡು ಪ್ರಾಣಿ ಪಕ್ಷಿಗಳಂತಹ ಸಕಲ ಜೀವರಾಶಿಗಳಲ್ಲಿಯೊ ತಪ್ಪುಗಳು ಉಂಟಾಗುತ್ತವೆ .ಆದರೆ ತಪ್ಪುಗಳು ಹೆಚ್ಚಾಗಿ ಮಾನವನೆ ಮಾಡುತ್ತಾನೆ.ಅದು ಅವನ ಮೂಲ ಆಸ್ತೀಯು ಹೌದು. ನಾನು ಸರಿಯಾದುದ್ದನ್ನೇ ಮಾಡುತ್ತೇನೆಂದರೆ ಸಾದ್ಯವಿಲ್ಲ. ತಪ್ಪುಗಳು ಮಾನವನ ಸರಿಯಾದುದೆಡೆ ಕೋಂಡೋಯ್ಯೋತ್ತವೆ .ಅಂತಹ ಸಂದರ್ಭಗಳು ವಿರಳ.
ತಪ್ಪು ಸರಿ ಒಂದೆ ನಾಣ್ಯದ ಎರಡು ಹೂವುಗಳಿದ್ದಂತೆ ತಪ್ಪಾದಾಗ ಎಲ್ಲಿ ತಪ್ಪಾಯಿತು ಎಂದು ವಿಚಾರಿಸಿ ಅದನ್ನು ತಿದ್ದಿಕೋಳ್ಳುವದು ಸಾದ್ಯವಾದ ಮಟ್ಟಿಗೆ ಪ್ರಯತ್ನಿಸಬೇಕು.ತಪ್ಪುಗಳ ಕಡೆಗೆ ಗಮನ ಹರಿಸದೇ ತಪ್ಪು ಮಾಡುತ್ತಲೇ ಹೋಗಬಾರದು .ಇದನ್ನೆ ಕವಿಯೋಬ್ಬ ಹಾಡಿ ಹೋಗಳಿದ್ದು ಹೀಗೆ ''ತಪ್ಪು ಮಾಡೋದು ಸಹಜಾಕಣೋ ತಿದ್ದಿ ನಡೆಯೊದು ಮನುಜಾಕಣೋ..."
ಹೌದು ಈ ಮಾತು ಸರಿಯಾಗೆ ಇದೆ . ತಪ್ಪು ಮಾಡಿದೆನೇಂದು ಅದನ್ನು ದೊಡ್ಡದಾಗಿ ಮಾರ್ಪಡಿಸದೆ ತಪ್ಪುಗಳನ್ನು ಸಮತೋಲನದಿಂದ ಅಳೆದು ನೋಡಿ ಸರಿಪಡಿಸಿಕೋಳ್ಳುವದು ಒಳಿತು .ತಪ್ಪಿಲ್ಲದ್ದನ್ನು ತಪ್ಪುತಪ್ಪಾಗಿ ತಿಳಿದು ಕೋಳ್ಳುವದು ಮಹಾನ ತಪ್ಪು. ತಪ್ಪು ಮಾಡಿದಾಗ ಯಾರೆ ಆಗಲಿ ತಪ್ಪಿನ ಒಳಿತು ಕೆಡಕಗಳನ್ನು ವಿಚಾರಿಸಿ ಒಂದು ಸೂಕ್ತ ನಿರ್ಧಾರ ತೆಗೆದುಕೋಂಡು ತೂಕವುಳ್ಳ ಸಲಹೆ ನೀಡಬೇಕು ಮತ್ತು ಸಾಧ್ಯವಾದ ಮಟ್ಟಿಗೆ ಸರಿಪಡಿಸಿಳ್ಳಲು ತಿಸಿಸಬೇಕು,.
ಹೀಗೆ ಮಾಡುವದು ತಪ್ಪೆನಿಲ್ಲ ಆದರೆ ಅವನುಸಮಯ ಸಂದರ್ಭ ನೋಡಿ ವರ್ತಿಸಬೇಕು ಅಷ್ಟೇ.ತಪ್ಪು ಮಾಡದಾಗ ಒಂದೋಂದು ಸಲ ಕ್ಷಮೀಸಬೇಕು .ತಪ್ಪು ಮಾಡಿದ ವ್ಯಕ್ತಿ ತನ್ನ ತಪ್ಪುಗಳ ಬಗ್ಗೆ ಎಚ್ಚರಗೋಂಡಾಗ ಮಾತ್ರ. ಒಮ್ಮೋಮ್ಮೇ ತಪ್ಪು ತಪ್ಪಾಗಿ ತೀಳಿದುಕೋಳ್ಳುವದು ತಪ್ಪೇ. ಅದೇನೇ ಇರಲಿ ಇಷ್ಟೇಲ್ಲಾ ಹೇಳುತ್ತಿರುವ ನಾನು ಈ ಲೇಖನ ಬರೆಯುವದರಲ್ಲಿ ಒಂದಿಷ್ಟು ತಪ್ಪ ತಪ್ಪಾಗಿ ವ್ಯಾಖ್ಯಾನಿಸಿರಬಹುದು. ಅದನ್ನು ತಪ್ಪಾಗಿ ತಿಳಿದುಕೋಳ್ಳದೆ ಸರಿಪಡಿಸಿಕೋಳ್ಳಿ .ತಪ್ಪು ಮಾಡೋದು ಮಾನವನ ಸಹಜ ಗುಣ.

4 comments:

shivu K said...

ಕನಸು,

ನಿಮ್ಮ ಮಾತು ಆಕ್ಷರಷಹ: ನಿಜ....ಚೆನ್ನಾಗಿ ಬರೆದಿದ್ದೀರಿ....ಬಡಿದಂತೆ ಬಗ್ಗುತ್ತಾ ಹೋಗಿ ಕೊಡಾಲಿ ಆಗಬಹುದು. ಕೋಲಾರ ಚಿನ್ನವೂ ಆಗಬಹುದು...
ಇಂಥ ಸಾಲುಗಲು ನನಗಿಷ್ಟವಾಗುತ್ತವೆ...

ನಿಮ್ಮ ಬ್ಲಾಗ್ನನ್ನು ನಿಮ್ಮ ಅನುಮತಿಯಿಲ್ಲದೆ ಲಿಂಕಿಸಿಕೊಂಡಿದ್ದೇನೆ... ಮತ್ತು ಹಿಂಬಾಲಿಸುತ್ತಿದ್ದೇನೆ...ನೀವು ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳ ಕಡೆ ಬನ್ನಿ... ಅಲ್ಲಿ ನಿಮಗಿಷ್ಟವಾದ ಫೋಟೊ ಮತ್ತು ಲೇಖನಗಳು ಸಿಗಬಹುದು.

ಸಿಮೆಂಟು ಮರಳಿನ ಮಧ್ಯೆ said...

mistake is not a mistake..
but ..
re-mistake is mistake..!

tumbaachennaagi barediddIri..
thank you..

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

"ತಪ್ಪು ಮಾಡುವುದು ಸಹಜ ಕಣೋ..ಅದನ್ನು ತಿದ್ದಿ ನಡೆಯೋದು ಮನುಜ ಕಣೋ..". ನಿಮ್ಮ ಮೊದಲ ಲೇಖನ ಓದಿದೆ..ಹಾಟ್ಯಾಪ್ ..ಸಾವಿರ ಕನಸುಗಳ ಜೊತೆಜೊತೆಯಲಿ..ಬೆರೆತು ಸಾಗಲಿ..ಲೇಖನಗಳ ಸರಮಾಲೆ...ಹೊಸ ವರುಷದ ಶುಭಾಶಯ.
-ತುಂಬುಪ್ರೀತಿಯಿಂದ,
ಚಿತ್ರಾ

ಕನಸು said...

ಹಾಯ್
ಶಿವಣ್ಣ ,ಚಿತ್ರಾ,ನಿಮ್ಮ ಪ್ರೀತಿಗೆ
ಮುಕ್ತ ಅನಿಸಿಕೆಗೆ ತುಂಭಾ ತುಂಭಾ ಧನ್ಯವಾದಗಳು
ತಮ್ಮಗೂ ನೂತನ ವರುಷದ ಶುಭಾಷಯಗಳು
ಪ್ರೀತಿ ಇರಲಿ
ಕನಸು