ಗುರುವಾರ, ಜುಲೈ 8, 2010

ಹೃದಯವೆ ಬಯಸಿದೆ ನಿನ್ನನೇ...!!

ಬರಿ
ಒಂದು ವಾರೆ ನೋಟದಿಂದ
ನಿನ್ನನ್ನು
ನನ್ನ ಗುಲಾಮನನ್ನಾಗಿ
ಮಾಡಿಕೊಂಡೆನೆಂದು
ನೀನು ಗುಲಾಮಗಿರಿಯ
ಶಿಲಾಶಾಸನವಾಗಬೇಕಿಲ್ಲ...ಕಣೋ..,
ನನ್ನನ್ನ ನನ್ನಿಂದ ಕಾಪಾಡಲು
ನನ್ನ ಪ್ರಿಯತಮನಾಗಿರು ಸಾಕು ;
ಅದಕ್ಕೆ ದಂಡವಾಗಿ
ಇದಕ್ಕೆ ಪೀಜ್ ಆಗಿ
ನನ್ನೇದೆಯ ಪ್ರೀತಿಯೆನ್ನೆಲ್ಲ..
ಸುರಿದು ಬಿಡುತ್ತೆನೆ...!!!