ಶನಿವಾರ, ಜೂನ್ 27, 2009

ನೀನೆಂದರೆ ಇವತ್ತಿಗೂ ನಂಗೆ ಪಂಚ ಪ್ರಾಣ..!!

ಸಾವಿರ
ಕನಸುಗಳಲ್ಲಿಯೆ
ಅವಳೊಂದು ಸುಂದರ
ಕನಸು..!!
ಆದರೂ
ಇಲ್ಲ ಅವುಗಳಿಗಿಂತ ಡಿಪರೆಂಟು
ರೈಟೋ - ರಾಂಗೋ
ಥೇಟೂ
ಆ.. ಕನಸುಗಳ ಹಾಗೇಯೇ
ಹೈಯ್ಟು - ವೆಯ್ಟು
ಕಣ್ಣ ಕುಕ್ಕುವ
ಆ ಸೂರ್ಯನಷ್ಟೆ
ಬ್ರೈಟು,
ಮೊದಲ ಸಲ
ಕಣ್ಣಲ್ಲಿ ಕಣ್ಣಿಟ್ಟು
ಎದುರು ಎದುರು ಕುಳಿತು
ಕುಡಿದ ಆ ಬೈ - ಟೂ
ಕಾಪಿಯಷ್ಟೇ
ಸ್ವೀಟು,
ಅದಕ್ಕೆ ಅವಳೆಂದರೆ ಇವತ್ತಿಗೂ
ನಂಗೆ ಪಂಚ ಪ್ರಾಣ..!!
ಇರಲಾಗುವದಿಲ್ಲ
ಅವಳ ನೆನೆಪಿಸದೇ ಒಂದು ದಿನ.