ಬುಧವಾರ, ಅಕ್ಟೋಬರ್ 27, 2010

ಹೆಸರು ಮರೆಯಬೇಕಿದೆ..!!

[ ಈ ಕವಿತೆ ನಂಗೆ ತುಂಭಾ ಇಷ್ಟವಾಯಿತು ಅದಕ್ಕೆ ಈ ಕವಿತೆಯನ್ನು ಸಾವಿರ ಕನಸಿನಲ್ಲಿ ಕವಿಯ ಅನುಮತಿ ಇಲ್ಲದೆ ಹಾಕುತ್ತಿದ್ದೆನೆ .ಕವಿತೆ ಬರೆದ ಕವಿಯ ಹೆಸರು ಸರಿಯಾಗಿ ನೆನಪಿಲ್ಲ ಅವರ ಹೆಸರು ಬಹುಶಃ ವಿ.ಭಟ್ಟ ಅಂತ ಇರಬೇಕು.ಅಪರೋಕ್ಷವಾಗಿ ಅನುಮತಿ ನೀಡಿದ ಕವಿಗೆ ಧನ್ಯವಾದಗಳು ]


ನೀನೊಲಿದರೆ ಕೊರಡು ಕೊನರುವದೆಂದು
ಹಗಲು ರಾತ್ರಿ ಕಾದಿದ್ದೆ
ಅದು ಗೆದ್ದಲು ಹಿಡಿದದ್ದು ಗೋತ್ತಾಗಲ್ಲಿಲ್ಲ


ನಿರೀಕ್ಷೆಯಲ್ಲಿ ಹಚ್ಚಿಟ್ಟ ಹೊಸ್ತಿಲ ದೀಪ
ಆಗಲೇ ನಂದಿರಬೇಕು, ಪ್ರೀತಿ ಕಳೆದ ಮೇಲೆ
ನವಿಲುಗರಿ ನೆಲಗುಡಿಸಲಿಕ್ಕೆ ಲಾಯಕ್ಕಲ್ಲವೇ..?


ಪ್ರೀತಿ ಪ್ರಣತಿಯಂಥದ್ದು ಎಂದಿದ್ದೆ ನೀನು
ಕರಗಿ ಉರಿದೆ ನೀನು
ನೀ ಮೈಯಷ್ಟೇ ಕಾಯಿಸಿಕೊಂಡೆ


ನಿನ್ನ ಬಗ್ಗೆ ಬರೆದ ಕವಿತೆಯ
ಮೊದಲ ಚರಣ ಗೆದ್ದಲು ತಿಂದಿದೆ
ಕವಿತೆಯ ಹೆಸರು-ಮರೆಯಬೇಕಿದೆ


ಕಳೆದು ಹೋದರೆ ಹೋಗಲೆಂದು ಬಿಸಾಡಿದ್ದ
ನೆನಪು ಮಾತ್ರ ಆಗಾಗ
ಮಂಚದ ಬಳಿ ಕಾಲಿಗೆ ಸಿಕ್ಕುತ್ತದೆ


ಪ್ರೀತಿಗೆ ನೆಪವಿಲ್ಲವೆಂದು
ಹೇಳಿದ್ದೆ ನೀನು, ನಂಬಿದ್ದೆ ನಾನು
ನೀ ಹೊಗಿದ್ದರ ಕಾರಣ ಕೇಳಿರಲಿಲ್ಲ


ಹುಚ್ಚ ಪ್ರೀತಿಯಲ್ಲಿ ಅಂದುಕೊಂಡಿದ್ದೆ
ಸತ್ತರೆ ಸಮಾಧಿ ನಿನ್ನ ಮನೆಯಿರುವ ಬೀದಿಯಲ್ಲಿ ಎಂದು
ಪುಣ್ಯಕ್ಕೆ ಅಲ್ಲಿ ಜಾಗವಿಲ್ಲ..!!

9 ಕಾಮೆಂಟ್‌ಗಳು:

ಮಹೇಶ ಭಟ್ಟ ಹೇಳಿದರು...

ತುಂಬಾ ಚೆನ್ನಾಗಿದೆ

balasubramanya ಹೇಳಿದರು...

ನಿರೀಕ್ಷೆಯಲ್ಲಿ ಹಚ್ಚಿಟ್ಟ ಹೊಸ್ತಿಲ ದೀಪ
ಆಗಲೇ ನಂದಿರಬೇಕು, ಪ್ರೀತಿ ಕಳೆದ ಮೇಲೆ
ನವಿಲುಗರಿ ನೆಲಗುಡಿಸಲಿಕ್ಕೆ ಲಾಯಕ್ಕಲ್ಲವೇ..? ಸಾಲುಗಳು ಚೆನ್ನಾಗಿವೆ ಕವಿತೆ ಬರೆದವರಿಗೆ ಹಾಗು ಪ್ರಕಟಿಸಿದ ನಿಮಗೆ ಧನ್ಯವಾದಗಳು.

ಮನದಾಳದಿಂದ............ ಹೇಳಿದರು...

ಚಂದದ ಕವನ, ಬರೆದ ಕವಿಗೂ ನಿಮಗೂ ಧನ್ಯವಾದಗಳು.

SATISH N GOWDA ಹೇಳಿದರು...

ಯಾರು ಬರೆದರೇನು ಕವಿತೆ ತುಂಬಾ ಚನ್ನಾಗಿದೆ. ಮೂಲ ಬರಹಗಾರನಿಗೆ ನನ್ನದೊಂದು ಪುಟ್ಟ ಥ್ಯಾಂಕ್ಸ್ ಹೇಳಿ ....

ಮನಸಿನಮನೆಯವನು ಹೇಳಿದರು...

ಪ್ರತಿ ಸಾಲುಗಳು ಅದ್ಭುತ..
ಈ ಸಾಲುಗಳು ತುಂಬಾ ಇಷ್ಟವಾದವು...
"ನಿರೀಕ್ಷೆಯಲ್ಲಿ ಹಚ್ಚಿಟ್ಟ ಹೊಸ್ತಿಲ ದೀಪ
ಆಗಲೇ ನಂದಿರಬೇಕು, ಪ್ರೀತಿ ಕಳೆದ ಮೇಲೆ
ನವಿಲುಗರಿ ನೆಲಗುಡಿಸಲಿಕ್ಕೆ ಲಾಯಕ್ಕಲ್ಲವೇ..?"

ನಿಮ್ಮಿಂದ ಬ್ಲಾಗಿನ ಬಗ್ಗೆ ಕೆಲವು ಮಾಹಿತಿ ಪಡೆಯಬೇಕಿದೆ..

ಸಂಪರ್ಕಿಸಿ:
manasinamane@gmail.com
9535838281

shivu.k ಹೇಳಿದರು...

ವಾಹ್! ಸೂಪರ್..ಅದಕ್ಕೆ ತಕ್ಕಂತೆ ಪೋಟೊ. ಅಂದಹಾಗೆ ಫೋಟೊದಲ್ಲಿರುವಾಕಿ ನಮ್ಮ ಪಕ್ಕದ ಮನೆಯವಳು ಅಂದ್ರೆ ನೀವು ನಂಬಲೇಬೇಕು.

ಸಾಗರದಾಚೆಯ ಇಂಚರ ಹೇಳಿದರು...

too good kanasu

venkat.bhats ಹೇಳಿದರು...

ನನ್ನ ಕವಿತೆಯನ್ನು ಮತ್ತೊಮ್ಮೆ ಓದಿಸಿದ ನಿಮಗೂ ನಿಮ್ಮ ಬ್ಲಾಗಿಗೂ ನೂರು ವಂದನೆಗಳು...

ಕವನವನ್ನು ಇಷ್ಟಪಟ್ಟು ಅಕ್ಕರೆಯ ಸಾಲುಗಳನ್ನು ಬರೆದ ಎಲ್ಲರಿಗೂ,ದಾರಿಯಲ್ಲಿ ಹೊಗುತ್ತಿದ್ದಾಗ ಕರೆದ ನಿಮ್ಮ ಮನೆಯ ಕನಸಿನ ಬಾಗಿಲಿಗೂ ಪ್ರೀತಿಯ ನೆನಕೆಗಳು.

ಈ ಮೂಲಕ ನನ್ನ ಕವನವನ್ನು ನಿಮ್ಮ ಬ್ಲಾಗಿನಲ್ಲಿ ಇಟ್ಟುಕೊಳ್ಳಲು ನಾನು ಕೊಟ್ಟ ಅಕ್ಕರೆಯ ಅನುಮತಿಯೂ..

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದದ ಕವನಗಳು. ವೆಂಕಟರಮಣ ಭಟ್ಟರಿಗೆ ವಂದನೆಗಳು. ಸಂಗ್ರಹಿಸಿದ್ದಕ್ಕೆ ತಮಗೂ ವಂದನೆಗಳು.