Sunday, January 4, 2009

ಅವನು ನನ್ನ ಎದೆ ಬಡಿತ.ಕಿರು ಬೆಳಕು,ಮುಂಜಾವ ಕನಸು...!!

ಪ್ರಿಯ ಗೆಳೆಯ
ಸಾವಿರದ ಸಾವಿರಾರು
ಕೋಟಿ ವರ್ಷ
ಬೇಳಗೊ ಸೂರ್ಯ, ಚಂದ್ರ
ನೀ ಆಗೆಂದು
ಕೇಳೆನು ನಾನು..!!
ಕ್ಷಣ ಹೊತ್ತಿ
ಅನುರಾಗ ಪ್ರೀತಿ
ಕೊಡೋ ಹಣತೆಯ
ಕಿರು ಬೆಳಕು
ನೀನಾದರೂ ಸಾಕು,
ಎಲ್ಲ ಎನೇಲ್ಲಾ
ಒಳಗೊಂಡ
ಗ್ರಂಥದೊಳಗಿನ ರಾಮಾಯಣ , ಮಹಾಭಾರತ
ನೀ ಆಗೆಂದು
ಕೇಳೆನು ನಾನು ..!!
ಪುಟ್ಟ ಹಾಳೆಯ
ಪುಟದ ಕೊನೆಯ
"ಸಿ ಯು ಅಗೇನ್'
ಶಬ್ದವಾದರೂ ಸಾಕು,
ಅಮರ ಪ್ರೇಮದ ದ್ಯೂತಕವಾಗಿ
ಜೀವವಿಲ್ಲದ ತಾಜ್ ಮಹಲ್ ,ಆಪ್ರೋಡೈಟ್
ನೀ ಆಗೆಂದು
ಕೇಳೆನು ನಾನು ..!!
ಹಾಡಿ ಕುಣಿದಾಡಿ
ನಲಿಯಲು ಹಿಡಿ
ಪ್ರೀತಿಯ ಎದೆ
ಬಡಿತವಾದರೂ ಸಾಕು,
ಆಶೆಗಳಿಗೆ ಕೊನೆ
ಇಲ್ಲಾ ಅಲ್ಲವಾ..?
ಆದಾಗು ಇದಾಗು
ನೀ ಆಗೆಂದು
ಕೇಳೆನು ನಾನು ..!!
ಮೂರು ದಿನದ
ಬದಕಿನೂದ್ದಕ್ಕೂ ಗೆಳೆಯ
ನೀನು ನೀನಾದರೆ ಸಾಕು..!!