ಮಂಗಳವಾರ, ನವೆಂಬರ್ 17, 2009

ಆಕಾಶ ದೀಪವು ನೀನು..!!


ನಾನು
ನಿನ್ನ ತುಂಭಾ ಪ್ರೀತಿಸಿದೆ
ಆದರೆ ಹೇಳಲಿಲ್ಲ..!!
ಒಂದಿನಾನೂ
ನಾನು
ನಿನ್ನ ನೋಡಬೇಕು ಅಂತ
ಓಡೋಡಿ ಬಂದೆ
ಆದರೆ ನೋಡಲಾಗಲಿಲ್ಲ
ಒಂದಕ್ಷಣಾನೂ
ನಿನ್ನ ನೋಡಬೇಕು ಅಂತ
ದೃಷ್ಟಿ ಹರಿಸಿದಾಗಲೆಲ್ಲ
ನನ್ನ ಕಣ್ಣ್ರೇಪ್ಪೆಗಳು ಅಡ್ಡ ಬರುತ್ತವೆ
ನನ್ನ ಹೃದಯದಾಳದ ಗುಟ್ಟುಗಳನ್ನು
ಅರುಹುಬೇಕೇಂದಾಗಲೇಲ್ಲ
ತುಟಿಗಳು ಅಡ್ಡ ಬರುತ್ತವೆ
ಬಹುಶ: ಅವುಗಳು
ನನಗಿಂತ ನಿನ್ನ ತುಂಭಾ ಪ್ರೀತಿಸಿರಬಹುದು..??

23 ಕಾಮೆಂಟ್‌ಗಳು:

Dileep Hegde ಹೇಳಿದರು...

ಉತ್ತಮ ಪ್ರಯತ್ನ...
ಕನ್ನಡದಲ್ಲಿ ಬ್ಲಾಗಿಸುವ ಕಷ್ಟದ ಅರಿವಿದೆ.. ಆದರೂ ಹೇಳುತ್ತಿರುವುದಕ್ಕೆ ಕ್ಷಮೆಯಿರಲಿ...

"ಒಂದಕ್ಷಣಾನೂ"... ಇದು ಒಂದು ಕ್ಷಣಾನೂ ಅಂತ ಆಗಬೇಕು...
ನನ್ನ "ಕಣ್ಣೇಗಳು" ಅಲ್ಲ. ನನ್ನ "ಕಣ್ಣುಗಳೇ" ಅಂತಿದ್ದರೆ ಸರಿಯೇನೋ...
"ಅರಹುಬೇಕೆಂದಾಗಲೆಲ್ಲ" ಅಲ್ಲ.... "ಅರುಹಬೇಕೆಂದಾಗಲೆಲ್ಲ" ಎಂದಾಗಬೇಕು...

ಕನಸು ಹೇಳಿದರು...

ದೀಲಿಪ್ ಸರ್,
ನಿಮ್ಮ ಕೀವಿ ಮಾತುಗಳು
ಮರೆಯಲಾರೆ
ಮತ್ತೆ ಮತ್ತೆ ಬರತ್ತಾ ಇರಿ

ಸಾಗರದಾಚೆಯ ಇಂಚರ ಹೇಳಿದರು...

ಕನಸು
ಕವನ ಚೆನ್ನಾಗಿದೆ
ಹೀಗೆಯೇ ಬರೆಯುತ್ತಿರಿ

Guruprasad ಹೇಳಿದರು...

ಚೆನ್ನಾಗಿ ಇದೆ ಕನಸು.. ನಿಮ್ಮ ಕವನ...ಗುಡ್ ಒನ್.. :-)

ಗೌತಮ್ ಹೆಗಡೆ ಹೇಳಿದರು...

ಚೆನ್ನಾಗಿದೆ ರೀ ನಿಮ್ಮ ಕವನ . ಹೀಗೆ ಬರ್ತಾ ಇರಲಿ ನಿಮ್ಮ 'ಕನಸು'ಗಳು ಕವಿತೆಗಳಾಗಿ :)

ದಿನಕರ ಮೊಗೇರ ಹೇಳಿದರು...

ಕನಸು,
ಕವನಗಳು ಮುದ್ದಾಗಿವೆ.... ಪ್ರೀತಿಸಿದವನಿಗೆ ಮುದ್ದಾದ ಕೈಯಿಂದ s. m . s ಕಳಿಸಿ.....

ಮನಸು ಹೇಳಿದರು...

ಚೆನ್ನಾಗಿದೆ ಕವನ

ಚಕೋರ ಹೇಳಿದರು...

ಹೊಸ ಬಗೆಯ ಚೆನ್ನಾಗಿರುವ ಕವಿತೆ. ಕಾಗುಣಿತ ತಪ್ಪುಗಳನ್ನು ಮರೆಸಿ ಸವಿಸುವಲ್ಲಿ ಕವಿತೆ ಯಶಸ್ವಿಯಾಗಿದೆ..:)

ಕನಸು ಹೇಳಿದರು...

ಸಾಗರದಾಚೆಯಿಂದ
ಬಂದ ಇಂಚರ ಸರ್
ಕವಿತೆ ಚೆನ್ನಾಗಿದೆ ಅಂತ ಹೆಳಿದ್ದಿರಿ
ಯಾಕ ? ಅಂತ ಹೇಳಲಿಲ್ಲ

ಕನಸು ಹೇಳಿದರು...

ಗುರು ಸರ್
ಕವಿತೆ ಚೆನ್ನಾಗಿದೆ
ಅಂದಿದ್ದಿರಿ ಆದರೆ ಯಾಕೆ ?
ನೀವು ಬರೆದಿಲ್ಲ..

ಕನಸು ಹೇಳಿದರು...

ಗೌತಮ್ ಸರ್,
ಕನಸುಗಳು ಕವಿತೆಗಳಾಗಲಿ
ಅಂದಿದ್ದಿರಿ
ಕವಿತೆ ಕನಸುಗಳಾದರೆ ಚೆಂದಾನೋ
ಕನಸುಗಳು ಕವಿತೆಗಳಾದರೆ ಚೆಂದಾನೋ ?
ಗೋತ್ತಾಗಲ್ಲಿ ನಿಮ್ಮ ಅಭಿಪ್ರಾಯ ಬೇಕು..

ಕನಸು ಹೇಳಿದರು...

ದಿನಕರ ಸರ್
ನಿಮ್ಮ ಅಭಿಮಾನಕ್ಕೆ ತುಂಬಾ ಧನ್ಯವಾದಗಳು
ಮತ್ತೆ ಬನ್ನಿ

ಕನಸು ಹೇಳಿದರು...

ಮನಸು,
ನಿಮ್ಮ ಪ್ರೀತಿಯ ಮರೆಯಲಾರೆ
ಹಾಗೆ ಬರತ್ತಾ ಇರಿ

ಕನಸು ಹೇಳಿದರು...

ಚಕೋರ,
ನೀವು ಮೋದಲ ಸಲ
ನನ್ನ ಬ್ಲಾಗಿಗೆ ಬಂದಿದ್ದಿರಿ
ಅದಕ್ಕೆ ನಿಮ್ಮಗೆ ಆತ್ಮಿಯ ಸ್ವಾಗತ
ಕಾಗುಣಿತ ತಪ್ಪುಗಳ ಬಗ್ಗೆ ಹೇಳಿದ್ದಿರಿ ಸಾಧ್ಯವಾದಷ್ಟು ತಿದ್ದಿಕೋಳ್ಳಲು
ಪ್ರಯತ್ನಿಸುವೇ
ಮತ್ತೆ ಬನ್ನಿ

Parisarapremi ಹೇಳಿದರು...

door kahin koi darpan toote.. taDapke mein rehjaataa hoon... - ಹಾಡು ನೆನಪಾಯಿತು. ಸುಂದರವಾಗಿದೆ..

ಹಾಗೇ, ದಿಲೀಪ್ ಅವರು ಹೇಳಿದ್ದು ಸಮಂಜಸ ಎಂದೆನಿಸಿತು.

ಗೌತಮ್ ಹೆಗಡೆ ಹೇಳಿದರು...

ಮೊದ ಮೊದಲು ನಮ್ಮ ಕನಸುಗಳು ಕವಿತೆಯಾಗಿ ಹೊಮ್ಮುತ್ತವೆ . ನಾವು ಬೆಳೆದಂತೆ ನಮ್ಮ ಕವಿತೆ ನಮ್ಮ ಕನಸಾಗಬೇಕು . ಆ ಕನಸುಗಳು ನನಸಾಗಬೇಕು . ನಾವು ಬೇರೆ ಅಲ್ಲ ನಮ್ಮ ಕವಿತೆ ಬೇರೆ ಅಲ್ಲ . ಕವಿತೆ ಬರಹ ರೂಪದ ನಾವು:) ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತೆಂದು ಕೊಳ್ಳುತ್ತೇನೆ .:) ನೀವು ಕೇಳಿದ್ದು ಖುಷಿ ಆಯ್ತು :)

ಜಲನಯನ ಹೇಳಿದರು...

ಕನಸೊಂದರಲಿ ಕನಸಕಂಡೆ ಎನ್ನುವಂತಿವೆ ನಿಮ್ಮ ಸಾಲುಗಳು...ನಿಮ್ಮ ಪ್ರಯತ್ನಕ್ಕೆ ಮೆಚ್ಚುಗೆ ಮತ್ತು ನಿಮ್ಮ ದಿಲೀಪರ ಕಿವಿಮಾತಿಗೆ ಓಗೊಟ್ಟ ಪರಿ..ಬೆಳವಣಿಗೆಯ ಲಕ್ಷಣಗಳು...ಶುಭವಾಗಲಿ ಎಂದೇ ಹಾರೈಕೆ...

hari ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
hari ಹೇಳಿದರು...

ತುಂಬ ಒಳ್ಳೆ ಕವಿತೆ, ಕವಿತೆಯ ಭಾವ ಚೆನ್ನಾಗಿದೆ ನನಗೆ ಅನ್ನಿಸುತ್ತದೆ ಕವಿಯ ಪ್ರಿಯಕರನಿಗೆ ಕವಿದೆ ದ್ರಿಷ್ಟಿ ತಗಲಬಹುದು ಅಂತ ಕಣ್ಣ ರೆಪ್ಪೆ ಕೂಡ ಅಡ್ಡ ಬಂತು.

ಕನಸು ಹೇಳಿದರು...

ಡಿಯರ್ ಸರ್
ನಿಮ್ಮ ಅಭಿಪ್ರಾಯಕ್ಕೆ
ತುಂಭಾ ಧನ್ಯವಾದಗಳು

Life is a challenge ಹೇಳಿದರು...

wonderful poem, thankyou you for visiting my blog.

Chaithra ಹೇಳಿದರು...

hey...very nice poems...thanks for your feedback about my blog...keep up the good work...and do visit my blog...

ಕನಸು ಹೇಳಿದರು...

ನಿಮ್ಮ
ಪ್ರೀತಿಯ ಅಭಿಪ್ರಾಯಕ್ಕೆ
ತುಂಭಾ ಥ್ಯಾಂಕ್ಸ
ಪ್ರೀತಿ ಇರಲಿ
ಕನಸು