ಶನಿವಾರ, ಜೂನ್ 27, 2009

ನೀನೆಂದರೆ ಇವತ್ತಿಗೂ ನಂಗೆ ಪಂಚ ಪ್ರಾಣ..!!

ಸಾವಿರ
ಕನಸುಗಳಲ್ಲಿಯೆ
ಅವಳೊಂದು ಸುಂದರ
ಕನಸು..!!
ಆದರೂ
ಇಲ್ಲ ಅವುಗಳಿಗಿಂತ ಡಿಪರೆಂಟು
ರೈಟೋ - ರಾಂಗೋ
ಥೇಟೂ
ಆ.. ಕನಸುಗಳ ಹಾಗೇಯೇ
ಹೈಯ್ಟು - ವೆಯ್ಟು
ಕಣ್ಣ ಕುಕ್ಕುವ
ಆ ಸೂರ್ಯನಷ್ಟೆ
ಬ್ರೈಟು,
ಮೊದಲ ಸಲ
ಕಣ್ಣಲ್ಲಿ ಕಣ್ಣಿಟ್ಟು
ಎದುರು ಎದುರು ಕುಳಿತು
ಕುಡಿದ ಆ ಬೈ - ಟೂ
ಕಾಪಿಯಷ್ಟೇ
ಸ್ವೀಟು,
ಅದಕ್ಕೆ ಅವಳೆಂದರೆ ಇವತ್ತಿಗೂ
ನಂಗೆ ಪಂಚ ಪ್ರಾಣ..!!
ಇರಲಾಗುವದಿಲ್ಲ
ಅವಳ ನೆನೆಪಿಸದೇ ಒಂದು ದಿನ.

4 ಕಾಮೆಂಟ್‌ಗಳು:

shivu.k ಹೇಳಿದರು...

ಕನಸು,

ನಿಮ್ಮ ಬ್ಲಾಗಿನ ಹೆಸರಿಗೆ ತಕ್ಕಂತೆ ಕನಸಿನ ಬಗ್ಗೆ ಕವನ ನೇಯುವುದರಲ್ಲಿ ನೀವು ಎತ್ತಿದ ಕೈ...

ಸಾವಿರ
ಕನಸುಗಳಲ್ಲಿಯೆ
ಅವಳೊಂದು ಸುಂದರ
ಕನಸು..!!

ಇವು ತುಂಬಾ ಸುಂದರ ಸಾಲುಗಳು...

ಕನಸು ಹೇಳಿದರು...

ಹಾಯ್ ,
ನಿಮ್ಮ ಮುಕ್ತ ಅಭಿಪ್ರಾಯಕ್ಕೆ
ತುಂಭಾ ಥ್ಯಾಂಕ್ಸ ಶಿವಣ್ಣ.

ಜಲನಯನ ಹೇಳಿದರು...

ಕನಸು ಕಾಣುವುದಕೂ ಮನಸು ಬೇಕು ಅಂತಾರಲ್ಲ..? ನಿಮ್ಮ ಕನಸು ಮನಸಿನಾಳದ ಭಾವನೆಗಳಿಗೆ ರೂಪದರ್ಶಿಯೇ ಹೇಗೆ..ಚನ್ನಾಗಿದೆ ಕನ್ನಡಾಂಗ್ಲ ಕವನ...ನನಗೆ ಕೈಲಾಸಂರ ಡೈಲಾಗುಗಳು ನೆನಪಾಗುತ್ವೆ...ನಿಮ್ಮ ಕವನ ನೋಡಿ

ಕನಸು ಹೇಳಿದರು...

ನಿಮ್ಮ ಪ್ರೀತಿ ತುಂಬಿದ ಅಭಿಪ್ರಾಯಕ್ಕೆ
ಅಷ್ಟೆ ಪ್ರೀತಿಯ ಧನ್ಯವಾದಗಳು