ಬುಧವಾರ, ಏಪ್ರಿಲ್ 15, 2009

ಹ್ಯಾಪಿ ಬರ್ತ ಡೆ ಟು ಯು..!!

ನಿನ್ನ
ಸಂಭ್ರಮಕ್ಕೆ
ಪ್ರೇಮ ಕಾವ್ಯದ
ಕಸುವು ಕೊಟ್ಟ
ನಿಮ್ಮೂರ
ಕೆರೆ-ಹಳ್ಳ-ಕಾಲುವೆಗಳಲ್ಲಿಯ
ಆ..ಚಿಕ್ಕ ಚಿಕ್ಕ
ಮೀನು ಮರಿಗಳೋಂದಿಗೆ
ಎಕಾಂತವಾಗಿ
ಮಾತಾಡಿ ನಾನು,
ಮುಗಿಲು
ಸುರಿಸುವ
ಸ್ವಾತಿ ಮಳೆ ಹನಿಗಳು
ಕಪ್ಪೆ ಚಿಪ್ಪೋಳಗೆ
ಸೇರಿ ಮುತ್ತಾಗುವ
ಮೊದಲು
ಆ..ಹನಿ ಹನಿಗಳನ್ನು
ಜೋಡಿಸಿ
ನಿನ್ನ ಕೊರಳಿಗೆ
ಹಾರವಾಗಿಸಿ
ನಿನ್ನ ಹ್ಯಾಪಿ ಬರ್ತಡೆಗೆ
ಕಳಿಸಿದೆನೆಂದು
ತುಟಿ ಕಚ್ಚಿ ಬೈಯದಿರೂ ಗೆಳತಿ
ಶ್ರೀಮಂತನಲ್ಲದ
ಈ ಬಡ ಪ್ರೇಮಿಯ [ಇ]ನ್ನು..!!

3 ಕಾಮೆಂಟ್‌ಗಳು:

ಮನಸು ಹೇಳಿದರು...

chennagide kavana...

shivu.k ಹೇಳಿದರು...

ಕನಸು,

ಕವನ ತುಂಬಾ ಸುಂದರವಾಗಿದೆ...

ಒಂದೊಂದೆ ಪದಗಳ ಪ್ರಯೋಗದಲ್ಲಿರುವ ಕವನವನ್ನು ನೋಡಿದಾಗ ನನಗೊಂತರ ಬೆರಗು...
ಧನ್ಯವಾದಗಳು...

ಕನಸು ಹೇಳಿದರು...

ಹಾಯ್
ನಿಮ್ಮ ಅನಿಸಿಕೆಗೆ ತುಂಭಾ ಥ್ಯಾಂಕ್ಷ