ಗುರುವಾರ, ಮಾರ್ಚ್ 12, 2009

ಹುಡುಗಿ ಮತ್ತು ಮಳೆ

ಸಣ್ಣಗೆ ಜಿನಗುತ್ತಿರುವ
ತುಂತುರು ಮಳೆಯ
ತಣ್ಣನೆಯ ಆ ನೆಲಕ್ಕೆ
ಮೆಲ್ಲಗೆ ಹೆಜ್ಜೆ ಉರುತ್ತ
ನಡೆಯುತ್ತಿರುವ
ಆ ಕಪ್ಪು ಹುಡುಗಿಗೆ
ಅವಳ ಅಮ್ಮ ಮುಂಜಾನೆ
ಒಂದು ತಾಸಿನವರೆಗೆ
ಮಾಡಿ ಕಳಿಸಿದ್ದ
ಮುಖದ ಮೆಕಪ್ಪು
ಒಂದಿಷ್ಟು ಮಳೆ ಹನಿಗಳಿಗೆ
ತೊಳೆದು ಹೊಗುವಂತೆ
ಅವಳ ಬಣ್ಣದ ಕನಸುಗಳು
ಸುರಿವ ಮಳೆಗೆ ಕರಗುವದಿಲ್ಲ..!!
ಮುಗಿಲ ಬೇವರಿಗೆ ನೆನೆದು ಬಣ್ಣಗೆಡುವದಿಲ್ಲ,
ಇನಿಯನ
ಒರಟು ಒರಟಾದ ಕೈಗಳಿಗೆ
ಸಿಕ್ಕು ಮಾಸಿದ
ಅವಳ ಸ್ನಿಗ್ಧ ನಗು
ಮಿಂಚಿನ ಜಳಕ್ಕೆ ಮಾಸುವದಿಲ್ಲ.!!
ಒರಟು ಒರಟಾದ
ಕಾಲ್ಮರಿ-ಬೂಟುಗಳ ಉದಾಸಿನಕ್ಕೆ
ಸಿಕ್ಕು
ಚದುರಿ ಹೋದ ರಂಗೋಲಿಯಂತೆ
ಅವಳ ಆಶೆಗಳು
ಹನಿಯೊಡೆದ ಮಳೆಗೆ ಕರಗುವದಿಲ್ಲ
ಪ್ರವಾಹಕ್ಕೆ ಸಿಲುಕಿ ಮುಳುಗುವದಿಲ್ಲ..!!

4 ಕಾಮೆಂಟ್‌ಗಳು:

shivu.k ಹೇಳಿದರು...

ಕನಸು,

ಮತ್ತದೆ ಸುಂದರ ಕನಸಿನಂತ ಕವನ...ಮಳೆಯಲ್ಲಿ ನೆನೆದಂತೆ ಆಯ್ತು...

ಕಾಲ್ಮರಿ-ಬೂಟುಗಳ ಉದಾಸಿನಕ್ಕೆ
ಸಿಕ್ಕು
ಚದುರಿ ಹೋದ ರಂಗೋಲಿಯಂತೆ
ಅವಳ ಆಶೆಗಳು
ಹನಿಯೊಡೆದ ಮಳೆಗೆ ಕರಗುವದಿಲ್ಲ

ಈ ಸಾಲುಗಳು ತುಂಬಾ ಇಷ್ಟವಾದವು...

ಮತ್ತೆ ಭೂಪಟ ನೋಡಲು ಬರಲಿಲ್ಲ...ಹೋಗಲಿ...ನನ್ನ ಮದುವೆಗಾದರೂ [ಲೇಖನ ] ಬರುತ್ತಿರ... ತಾನೆ...

http://chaayakannadi.blogspot.com/

ಕನಸು ಹೇಳಿದರು...

ಹಾಯ್ ಶಿವಣ್ಣ,
ತುಂಭಾ ಥ್ಯಾಂಕ್ಸ ..
ನಿಮ್ಮಗೆ ಇಷ್ಟವೆ ಇಂತ ಸುಂದರ ಕವಿತೆಗಳ
ಸೃಷ್ಟಿಗೆ ಸ್ಪೂರ್ತಿ..

ಧರಿತ್ರಿ ಹೇಳಿದರು...

ನಮ್ಮೂರ ಮಳೆಯನ್ನು ನೆನೆಸಿಕೊಂಡೆ. ಸುಂದರ ಕವನ..ಬಿಡ್ರೀ ನೀವು ಬರೆಯೋ ಕವನ ಯಾವಾಗಲೂ ಹಾಗೇ ಸುಂದರ..ಅಲ್ಲವೇ? ಶುಭವಾಗಲಿ
-ಧರಿತ್ರಿ

ಕನಸು ಹೇಳಿದರು...

ದರಿತ್ರೀಯವರೆ,
ತುಂಭಾ ಥ್ಯಾಂಕ್ಸ ಪಾರ್ ವಿಜಿಟ್ ಮಾಯ್ ಬ್ಲ್ಯಾಗ್..
ಆಗಾಗ್ಗೆ ಸಾವಿರ ಕನಸಿಗೆ ಬರತಾ ಇರಿ
ಪ್ರೀತಿ ಇರಲಿ
-ಕನಸು