ಬುಧವಾರ, ಫೆಬ್ರವರಿ 25, 2009

ನನ್ನ ಕಣ್ಣುಗಳೇಕೊ ಅವಳ ದೋಸ್ತಿ ಮಾಡುತ್ತಿವೆ..!!

ಮೊನ್ನೆ ಸಂಜೇ
ಕಡಲ ಕಿನಾರೆಯ
ದಾರಿಯಲ್ಲಿ
ಜತೆ ಜತೆಯಾಗಿ
ಹೆಜ್ಜೆ ಹಾಕುವಾಗ
ಅಮ್ಮ ಮೇಲಗೆ ನುಡಿದಳು
"ಮಗು
ನಿನ್ನ ಕಣ್ಣುಗಳನ್ನು
ಹಾಗೆಲ್ಲಾ
ಒರಟು ಬೆರಳುಗಳಿಂದ ಉಜ್ಜಬೇಡ..!!
ನಿನ್ನ ಕಣ್ಣೋಳಗಿನ
ಮೋಹಕ ಕನಸಾದ
ಆ.. ಹೂವಿನಂಥ ಹುಡುಗಿಗೆ
ಗಾಯವಾದಿತು..!!"
ಸಾರಿ ಮಮ್ಮಿ
ಅಂದೆನಾದರೂ
" ನನ್ನ ಕಣ್ಣುಗಳೆಂಬ
ಪುಟ್ಟ ಜಗತ್ತಿನ ತುಂಬ
ನೀನೆ ಇರುವೆ "ಅಂತಾ ಸುಳ್ಳು ಹೇಳಿ
ಸತ್ಯ ಮುಚ್ಚಿಡಲಾಗಲಿಲ್ಲ..!!
ಯಾಕೆಂದರೆ
ಇತ್ತಿತ್ತಲಾಗಿ
ನನ್ನ ಕಣ್ಣುಗಳೇಕೊ
ಆ..ಮುದ್ದು ಹುಡುಗಿಯ
ದೋಸ್ತಿ ಮಾಡುತ್ತಿವೆ..!!

5 ಕಾಮೆಂಟ್‌ಗಳು:

shivu.k ಹೇಳಿದರು...

ಕನಸು,

ಕವನ ತುಂಟತನದಿಂದಿದ್ದರೂ ನಿಜವನ್ನು ಹೊರಗೆಡುವುವಲ್ಲಿ ಸಫಲವಾಗಿದೆ.....

ಆಹಾಂ! ನನ್ನ ಬ್ಲಾಗಿನಲ್ಲಿ ಹಳೇ ಮನೆ ನೆನಪುಗಳು...ಹೊಸಮನೆಯ ಕನಸು...ಲೇಖನವಿದೆ. ಬಿಡುವು ಮಾಡಿಕೊಂಡು ಬನ್ನಿ....

ಚಿತ್ರಾ ಸಂತೋಷ್ ಹೇಳಿದರು...

ಮುಗ್ಧತೆಯ ಪ್ರತಿಬಿಂಬ ಈ ಕವನ.
ರೀ ..ಮುದ್ದು ಹುಡುಗಿ ಯಾರು? ನಮಗೂ ಹೇಳ್ರೀ..
-ಚಿತ್ರಾ

ಕನಸು ಹೇಳಿದರು...

ಶಿವಣ್ಣ ,
ನಿಮ್ಮ ಪ್ರೀತಿಯ ಅಭೀಪ್ರಾಯಕ್ಕೆ ತುಂಭಾ ಧನ್ಯವಾದಗಳು
ನಿಮ್ಮ ಮುಕ್ತ ಅನಿಸಿಕೆ ನನ್ನ ಬರಹಕ್ಕೆ ಸ್ಪೂರ್ತೀ.
ಚಿತ್ರಾ ಮೆಡಂ,

ಆ.. ಮುಗ್ಧ ಹುಡುಗಿ ಬಗ್ಗೆ ಮತ್ತೆ ಎಂದಾದರೂ ಒಂದು ದಿನ
ಲೇಖನ ಬರೆಯತ್ತೆನೆ.

ತುಂಭಾ ಬಿಜಿಯಲ್ಲೂ ಸ್ವಲ್ಪ ಬಿಡುವು ಮಾಡಿಕೊಂಡು ನನ್ನ ಬರಹಗಳನ್ನು ಓದಿಕೊಂಡು ಪ್ರೀತಿಯಿಂದ ಅನಿಸಿದ್ದನ್ನು ಮುಕ್ತವಾಗಿ ಬರೆದು ಬಿಡುವ ನಿಮ್ಮಗೆ ನೂರೋಂದು ವಂದನೆಗಳು
ನಿಮ್ಮ ಲೇಖನ ಸಂಡೆ ಇಂಡಿಯನ್ ದಲ್ಲಿ ಓದುತ್ತಿದ್ದೆನೆ .

Unknown ಹೇಳಿದರು...

what an ewonderful truth you have told really its very nice.....

Unknown ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.