ಬೆಂಗಾಡಿನ ತಂಗಾಳಿಯಲ್ಲಿ
ಸೋಂಯ್ಯೆನೆ ತೆಲಿ ಹೋದ
ಆ..ಗುಂಡು
ಕಣಿವೆಯ ದಾರಿಯ
ತಿರುವಿನಲ್ಲಿ ಮರೆಯಾದ
ನೀಲಿ ಕಂಗಳ ಹುಡುಗಿ
ನಿಶಬ್ದ ಮೌನದಲ್ಲಿ
ಶಬ್ಧಗಳ ಪೋಣಿಸುತ್ತ
ಕುಳಿತ ಯುವತಿ
ಬೇಕೆಂತಲೇ ಬಸ್ಸು
ತಪ್ಪಿಸಿಕೊಂಡ ಕಪ್ಪು
ಟೀ-ಶರ್ಟಿನ ಹುಡುಗ
ಪ್ರಶಾಂತವಾದ ಎದೆಯ
ಸರೋವರದಲ್ಲಿ ಮಧುರ
ಅಲೆಗಳನ್ನೆಬ್ಬಿಸಿ ಹೋದ ಚೆಲುವೆ
ಬಟ್ಟ ಬಯಲಲ್ಲಿ
ಬಿಟ್ಟ ಕಂಗಳಲ್ಲಿ ಒಂಟಿ
ಕಾಲಲ್ಲಿ ನಿಂತಿರುವ ಹುಚ್ಚ
ಹೌದು ..! ಆ ಅವರೇ
ನನ್ನ ಊಹೆ ನಿಜವಾಗುತ್ತಿದೆ
ನೀಲ ಗಗನದ ಆ..ತಾರೆ
ಹಾಗೆ ನನ್ನ ಕಣ್ಣ್ರೇಪ್ಪೆಯೋಳಗೆ
ಇಂದೇಕೋ ಮತ್ತೆ ಮತ್ತೆ
ನೆನಪಾಗುತ್ತಲೇ ಇದ್ದಾರೆ..!!
ಖಾಲಿ ಕಣ್ಣಿನ ಕ್ಯಾನವಾಸಿನೊಳಗೆ
ಚಿತ್ರವಾಗುತ್ತಲೆ ಇದ್ದಾರೆ.
2 ಕಾಮೆಂಟ್‌ಗಳು:
ಕನಸು,
ನಿಮ್ಮ ಕನಸಿನಂತೆಯೇ ಇದೆ ಕವನ.....ಪದಗಳ ಪ್ರಯೋಗ ಚೆನ್ನಾಗಿದೆ......
ನನ್ನ ಬ್ಲಾಗಿನಲ್ಲಿ ಹೊಸ ಲೇಖನವನ್ನು ಹಾಕಿದ್ದೇನೆ....ನೋಡಲು ಬಿಡುವು ಮಾಡಿಕೊಂಡು ಬನ್ನಿ....
ಒಳ್ಳೆ ಕಲ್ಪನೆ ಕಣ್ರೀ..
-ಚಿತ್ರಾ
ಕಾಮೆಂಟ್ ಪೋಸ್ಟ್ ಮಾಡಿ