Friday, October 24, 2008

ಹುಡುಗಿ,ರಂಗೋಲಿ ಮತ್ತು ಮಳೆಹನಿ..!!

ಆ..ಒಂದು
ಸಂಜೆ
ಸಣ್ಣಗೆ ಸುರಿಯುತ್ತಿದ್ದ
ಕಪ್ಪು ಮೋಡದ
ಬಿಳಿ ಬಿಳಿ ಹನಿಗಳನ್ನು
ಇವತ್ತು
ತುಳಿದೆ ಬಿಡಬೆಕೇಂದು
ಹಟಕ್ಕೆ ಬಿದ್ದವಳ
ಪಾದಕ್ಕೆರಗಿದ
ಆ..ಕನ್ಯೆಯ
ಕಣ್ಣ ಕೊನೆಯಲ್ಲಿ
ಸಣ್ಣದಾಗಿ ತೊಟ್ಟಿಕ್ಕಿದ
ಪನ್ನೀರ ಬಿಂದುಗಳ
ಮೊನ್ನೆ
ಮುಂಜಾನೆ
ತನ್ನ ಕನಸ್ಸಿನರಮನೆಗೆ
ಆಗಮಿಸುತ್ತಿದ್ದ
ಹೊಸ ಹುಡುಗನ
ಚಂದನೆಯ ಕನಸುಗಳಿಗೆ
ಎದೆಯ ಮಿದುವಿನ
ಅಂಗಳದಲ್ಲಿ
ತುದಿ ಬೆರಳುಗಳಿಂದ
ಚುಕ್ಕಿ ಚುಕ್ಕಿಗಳನಿಟ್ಟು
ಬಿಡಿಸಿದ ವರ್ಣರಂಜಿತ
ರಂಗೋಲಿಯ
ತೊಯ್ಸಿ ಹಾಳುಗೆಡವಿದ
ಇವತ್ತಿನ '' ಆ..ದಿನಗಳ "
ಮಳೆ ಹನಿಗಳು..!!
ಆವತ್ತು ಕಣ್ಣ ಕೆಂಪಾಗಿಸಿದ್ದಕ್ಕೆ
ಇವತ್ತು ಒದೆ ತಿನ್ನುತ್ತಿವೆ..!!