ಶುಕ್ರವಾರ, ಡಿಸೆಂಬರ್ 12, 2008

ಪ್ರೀತಿ ಎಂಬ ಅಮರ ಕಾವ್ಯ.. !!

ನೋವಿನಲ್ಲೂ ಆನಂದ ಕೊಡುವ
ಅಸಾಮಾನ್ಯ ಭಾವ,
ಗಾತ್ರ -ಸ್ವರೂಪವಿಲ್ಲದಿದ್ದರೂ ಎಲ್ಲ
ಅಡಗಿಸಿಕೊಂಡ ನಿಧಿ,

ಪ್ರೀತಿ ಎಂದರೆ...!
ಮೈತಳೆದು ನಿಲ್ಲುವ
ಸಾಹಿತ್ಯ ಸೊಡರಿನ
ಮೂಲ ದ್ರವ್ಯ,
ಅಳಿಯದೆ ಉಳಿಯುವ
ಕಣ್ಣಿದ್ದು ನೋಡಲಾಗದ
ದಿವ್ಯ ಶಕ್ತಿ,

ಪ್ರೀತಿ ಎಂದರೆ..!!
ಬೆಳಕಿಲ್ಲದ ರಾತ್ರಿಯಲ್ಲೂ
ಕಾಣಿಸುವ ವಸಂತದ ಹಗಲು,
ಕಷ್ಟ-ಸುಖ ,ತ್ಯಾಗ-ಬಲಿದಾನಗಳಲ್ಲೂ
ಪ್ರಹವಿಸುವ ಜೀವನದಿ,

ಪ್ರೀತಿ ಎಂದರೆ..!!
ಎಲ್ಲಿಯೂ ಇಲ್ಲವೆಂದರೂ
ಎಲ್ಲೆಲ್ಲೂ ಪಸರಿಸಿದ
ಕಣ್ಣಿಲ್ಲದ ನೋಟ,
ಹಾಳೆಯಲ್ಲಿ ಕುಂಚವಿಲ್ಲದೆ ಚಿತ್ರಿಸುವ
ಅಂಟಿದರೂ ಅಂಟದಂತಿರುವ
ಸುರಮ್ಯ ಕಲೆ,

ಪ್ರೀತಿ ಎಂದರೆ..!!
ಒಮ್ಮೆಯೂ ಗೋಚರಿಸದ
ಕಣ್ಣಿಲ್ಲದೆ ನೋಡಬಹುದಾದ
ಅನುಪಮ ರೂಪರಾಶಿ,
ಅನಕ್ಷರಸ್ತರೂ ಓದಬಹುದಾದ
ಅಕ್ಷರಗಳಿಲ್ಲದ ಅಮರ ಕಾವ್ಯ [ಪುಸ್ತಕ],

ಪ್ರೀತಿ ಎಂದರೆ..!!
ಭಾವದ ಬಸಿರಿಗೆ
ಜೀವ ಸ್ಪರ್ಶ ಕೊಡುವ
ನವಿರಾದ ಕನಸು
ನೀರನ್ನೆ ಕೆತ್ತಿ ಸೃಷ್ಟಿಸಿದ
ಹೃದಯ ನಾಕದ ಅಪೂರ್ವ ಶಿಲ್ಪ,

ಪ್ರೀತಿ ಎಂದರೆ..!!
ಎಷ್ಟೇಲ್ಲಾ ಓದಿದರೂ ಮುಗಿಯದ
ಬರೆದರೂ ಬರಿದಾಗದ
ಲಿಪಿಯಿಲ್ಲದ ಭಾಷೆ,
ಪ್ರೀತಿ ಎಂದರೆ.. ಪ್ರೀತಿ
ಪ್ರೀತಿ.. ಎಂದರೆ..ಪ್ರೀತಿ
ಪ್ರೀತಿಯೇ ಪ್ರೀತಿ...!!

9 ಕಾಮೆಂಟ್‌ಗಳು:

ಸುಧೇಶ್ ಶೆಟ್ಟಿ ಹೇಳಿದರು...

ಕನಸು ಅವರೇ,
ನಿಮ್ಮ ಎಲ್ಲಾ ಕವನಗಳನ್ನು ಓದಿದೆ. ಚೆನ್ನಾಗಿವೆ. ಹೀಗೆ ಬರೆಯುತ್ತಿರಿ. ಕವನಗಳು ಮಾತ್ರವಲ್ಲದೇ ಕಥೆ, ಲೇಖನಗಳನ್ನೂ ಬರೆಯುತ್ತಿರಿ.

- ಸುಧೇಶ್

kanasu ಹೇಳಿದರು...

ನನ್ನ ಕನಸಿಗೆ ಬಂದ "ಕನಸೊಳಗೆ" ಇಣುಕಿ ನೋಡಲು ಬಂದೆ.....ನಿಮ್ಮ ಬರಹಗಳು ತುಂಬ ಚೆನ್ನಾಗಿವೆ :)

shivu.k ಹೇಳಿದರು...

ಪ್ರೀತಿ ಎಂದರೆ ಕವನ ಓದಿದೆ. ಪ್ರೀತಿಯ ಬಗ್ಗೆ ನಿಮ್ಮ ಪದ ಫೋಣಿಸುವಿಕೆ ಚೆನ್ನಾಗಿದೆ. ಉಳಿದ ಕವನಗಳನ್ನು ಬಿಡುವು ಮಾಡಿಕೊಂಡು ಓದುತ್ತೇನೆ. ಹೀಗೆ ಬರೆಯುತ್ತಿರಿ....

ಆಹಾಂ! ನನ್ನ ಬ್ಲಾಗಿಗೆ ಬಂದು ನನ್ನ ಚಿತ್ರಲೇಖನಗಳನ್ನು ನೋಡಿದ್ದಕ್ಕೆ ಥ್ಯಾಂಕ್ಸ್. ಮತ್ತು ಇನ್ನುಳಿದ ಲೇಖನಗಳನ್ನು ಬಿಡುವುಮಾಡಿಕೊಂಡು ಓದಿ. ನನ್ನ ಮತ್ತೊಂದು ಬ್ಲಾಗ್ "ಕ್ಯಾಮೆರಾ ಹಿಂದೆ" ಅದರಲ್ಲಿ ನನಗಿಷ್ಟವಾದ ಪ್ರೀತಿಯಿಂದ ಬರೆಯುವ ನನ್ನ ಲೇಖನಗಳಿವೆ. ಅದರ ವಸ್ತುವು ವಿಭಿನ್ನವಾದುದು. ಅದಕ್ಕೂ ಬಿಡುವು ಮಾಡಿಕೊಂಡು ಬನ್ನಿ.

ಬಾನಾಡಿ ಹೇಳಿದರು...

ನಿಮ್ಮಲ್ಲಿ ಕವನ ಬರೆಯುವ ಪ್ರತಿಭೆಯಿದೆ. ನೀವು ಬಹಳಷ್ಟು ಹೊಸ ಮತ್ತು ಹಳೆಯ ಕವಿಗಳನ್ನು, ವಿಮರ್ಶೆಗಳನ್ನು ಓದಿರಿ. ಆಗ ನಿಮ್ಮ ಬರವಣಿಗೆಯಲ್ಲೂ ಇನ್ನೂ ಹೆಚ್ಚಿನ ಪ್ರಗತಿ ಕಾಣಬಹುದು. ಸುಮ್ಮನೆ ನಿಮ್ಮನ್ನು ಹೊಗಳುವವರನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಹೆಚ್ಚು ಪರಿಶ್ರಮ ಮಾಡಿದರೆ ಕನ್ನಡಕೊಬ್ಬ ಉತ್ತಮ ಕವಿ ಸಿಕ್ಕ ಹಾಗಾಗುತ್ತದೆ. ಬರೆಯುತ್ತಿರಿ. ಆದರೆ ಬರೆದುದೆಲ್ಲವೂ ಪಕ್ವವಾಗಿದ್ದಿರಬೇಕಿಲ್ಲ. ಅಭಿನಂದನೆಗಳು.
ಒಲವಿನಿಂದ
ಬಾನಾಡಿ

ಚಿತ್ರಾ ಸಂತೋಷ್ ಹೇಳಿದರು...

ಕವನಗಳ ಜೊತೆ ಲೇಖೀನಗಳನ್ನು ಬರೆದರೆ ಇನ್ನಷ್ಟು ಚೆನ್ನ!!
-ತುಂಬುಪ್ರೀತಿ,
ಚಿತ್ರಾ

ತೇಜಸ್ವಿನಿ ಹೆಗಡೆ ಹೇಳಿದರು...

ಕನಸು,

ಚೆನ್ನಾಗಿ ಮೂಡಿದೆ ಕವನ. ನಿಮ್ಮಲ್ಲಿ ಉತ್ತಮ ಪ್ರತಿಭೆಯಿದೆ. ಉಳಿಸಿ, ಬೆಳೆಸಿದರೆ ಉತ್ತಮ ಬರಹಗಾರರಾಗುವ ಕನಸು ನನಸಾಗುವುದು ಖಂಡಿತ. ಶುಭವಾಗಲಿ.

ಅಂದಹಾಗೆ ನಾನೂ "ಪ್ರೀತಿ"ಯ ಕುರಿತು ಎರಡು ಕವನಗಳನ್ನು ರಚಿಸಿದ್ದೆ. ಬಿಡುವಾದಾಗ ನೋಡಬಹುದು. ಲಿಂಕ್‌ಗಳು ಇಲ್ಲಿವೆ...

http://manasa-hegde.blogspot.com/2008/01/preethi.html
&
http://manasa-hegde.blogspot.com/2008/01/blog-post_115.html

ಚರಿತಾ ಹೇಳಿದರು...

ಚೆನ್ನಾಗಿದೆ ಕಣ್ರಿ..:)
ವಿಪರೀತ ರೊಮ್ಯಾಂಟಿಕ್......

Unknown ಹೇಳಿದರು...

ಪ್ರೀತಿ ಎಂದರೇನು....ನಂಗೆ ಗೋತ್ತಾಗ್ತಿಲ್ಲ‌‌

Unknown ಹೇಳಿದರು...

I love u kane..
ಅಂತ ಹೃದಯದಿಂದ ಹೇಳಿದೆ...ಅದ್ರ
ಅವಳು ಜಾಬ್ ಲ್ಲಿ ಇದಿರ, ಆಸ್ತಿ ಎಷ್ಟು ಇದೆ..ಅಂತ.ಕೇಳ್ತಾಳೆ....!