ಮಂಗಳವಾರ, ಅಕ್ಟೋಬರ್ 21, 2008

ಅವಳ ಸುಳಿವಿಗೆ ಎರಡು ಸಾಕ್ಷಿಗಳು..!!

ಆ..ಹುಡುಗಿ
ಇಲ್ಲೇ ಹಾದು ಹೋಗಿದ್ದಾಳೆ
ಸುಳಿವು ಬೇಕೆ ..?
ಅದೋ ಅಲ್ಲಿ ನೋಡಿ
ಅವಳ
ಹೆಜ್ಜೆಯ ನೀನಾದಕ್ಕೆ
ನಿದ್ದೆ ಹೋದ
ಆ..ಕಲ್ಲುಗಳು
ಇನ್ನೂ ಎದ್ದಿಯೇ ಇಲ್ಲ.!
ಬೇಕಿದ್ದರೆ
ಸ್ವಲ್ಪು ಗಮನಿಸಿ ನೋಡಿ
ಆ..ಅಲ್ಲಿ
ನಿಂತಲ್ಲಿಯೇ ನಿಂತು
ತುಕಡಿಸುತ್ತಿರುವಂತೆ ಕಾಣುತ್ತಿರುವ
ಆ..ಗಿಡ-ಹೂ-ಬಳ್ಳಿಗಳು
ಅವಳ ಕೈಯ
ಬಳೆಗಳ ಮಧುರ ಲಯಕ್ಕೆ
ಸೋತು
ಇನ್ನೂ ತಲೆ ಹಾಕುತ್ತಲೆ ಇವೆ.

1 ಕಾಮೆಂಟ್‌:

shivu.k ಹೇಳಿದರು...

ವಾಹ್! ತುಂಬಾ ಸೊಗಸಾಗಿದೆ ಕವನ.

ಅವಳ ಹೆಜ್ಜೆಯ ನೀನಾದಕ್ಕೆ ನಿದ್ದೆ ಹೋದ ಆ ಕಲ್ಲುಗಳು ಇನ್ನೂ ಎದ್ದಿಯೇ ಇಲ್ಲ!

ಬಲು ಇಷ್ಟವಾಯಿತು..

ಆಹಾಂ! ನನ್ನ ಹೆಸರು ಶಿವು. ಛಾಯಾಗ್ರಾಹಕ. ಮತ್ತು ಮತ್ತೊಂದು ವೃತ್ತಿ ದಿನಪತ್ರಿಕೆ ವಿತರಣೆ. ನೀವೊಮ್ಮೆ ನನ್ನ ಎರಡು ಬ್ಲಾಗಿಗೆ ಬನ್ನಿ.. ಅಲ್ಲಿ ನಿಮಗಿಷ್ಟವಾಗುವ ಲೇಖನಗಳು ಮತ್ತು ಫೋಟೊಗಳು ಇರಬಹುದೆಂದುಕೊಳ್ಳುತ್ತೇನೆ.