ಭಾನುವಾರ, ಅಕ್ಟೋಬರ್ 19, 2008

ಅವಳು-ಇವಳು-ನಾನು-ಪ್ರೇಮಿಗಳು..!!

ಪ್ರೀತಿಗಾಗಿ ನಾ ಕೊಟ್ಟ..
ಆ ಕೆಂಪು ಗುಲಾಬಿ
ಇನ್ನೂ ಇದೆ ; ಅವಳ ಜಡಿಯಲ್ಲಿ
ಆದರೆ ಆದಲ್ಲ , ಬೇರೆ
ಅದರ ನೆನಪಿಗಾಗಿ ಮಾತ್ರ
ಅದೇ ಕೆಂಪು ಗುಲಾಬಿ.!

ನನಗಾಗಿ ಆಕೆ ಕೊಟ್ಟ..
ಆ ಮುಗ್ಧ ಪ್ರೀತಿ
ಇನ್ನೂ ಇದೆ ; ಇವಳ ಹೃದಯದಲ್ಲಿ
ಆದರೆ ಅವಳಿಲ್ಲ , ಇವಳಿದ್ದಾಳೆ
ಪ್ರೀತಿ ಮಾತ್ರ ಅದೇ.!

ಆ ಮಧುರ ನೆನಪು
ಇನ್ನೂ ಇದೆ ; ನನ್ನ ಕಣ್ಣುಗಳಲ್ಲಿ
ಆದರೆ ಅವಳಿಲ್ಲ , ದಿನಗಳು
ಮಾತ್ರ ಅದನ್ನು ನೆನಪಿಸಲು
ಒಂದು ವರ್ಷವೂ ಮಿಸ್ ಮಾಡಿಲ್ಲ.!

ಪ್ರೀತಿಗಾಗಿ ಸಾಯಲು
ಇನ್ನೂ ಇದ್ದಾರೆ ; ಅನೇಕ ' ಮಮತಾಜರು'
ಆದರೆ ಅವರ ನೆನಪಿಗಾಗಿ
' ತಾಜ್ ಮಹಲ್ ' ಕಟ್ಟಿಸಲು
ಇಂದಿಲ್ಲ ' ಷಹಜಹಾನ ' ನಂಥ ಸುಲ್ತಾನರು.!

1 ಕಾಮೆಂಟ್‌:

shivu.k ಹೇಳಿದರು...

ಆದರೆ ಅವಳಿಲ್ಲ. ಇವಳಿದ್ದಾಳೆ
ಪ್ರೀತಿ ಮಾತ್ರ ಅದೇ !

ಬಲು ಚೆನ್ನಾಗಿ ಬರೆಯುತ್ತೀರಿ.....