ಮಂಗಳವಾರ, ಅಕ್ಟೋಬರ್ 21, 2008

ಅದು ಬರಿ ಖಾಲಿ ಜಾಗ..!

ಅವಳ
ಹೊಳಪು ಹೊಳಪಾದ
ಲಾವಣ್ಯದ ಕಾಂತಿಗೆ
ಆ.. ಅಮವಾಸ್ಯೆಯ
ಕಗ್ಗತ್ತಲೂ ಸಾಲುತ್ತಿಲ್ಲ..!
ಬೆಳದಿಂಗಳ ರಾಶಿ
ಹಾಸಿ
ಮಲಗಬೇಕೆಂದವಳಿಗೆ
ಕತ್ತಲೆ ಗತಿ
ಯಾಕೆಂದರೆ ಕತ್ತಲಂತೆ
ಬೆಳದಿಂಗಳ ಹಾಸಿಕೊಳ್ಳಲಾಗುವದಿಲ್ಲ..!
ಆದರೆ ಹೊದ್ದುಕೊಳ್ಳಬಹುದು
ಇದು
ಅವಳು ಬರೆದ ಕವಿತೆ
ಇದಕ್ಕೆ ಕಾಮೆಂಟ್ಸ್ ಬರೆಯಬೇಕೆ..?
ನನ್ನ ಹೃದಯ ಕಳಿಸಿದ್ದೆನೆ
ಗಿಚಿ ಬಿಡಿ ಎನಾದರೂ
ಇನ್ನೂ ಮುಂದೆ ಆಗದಿರಲಿ
ಅದು ಬರಿ ಖಾಲಿ ಜಾಗ..!!

1 ಕಾಮೆಂಟ್‌:

shivu.k ಹೇಳಿದರು...

ಯಾಕೆಂದರೆ ಕತ್ತಲಂತೆ ಬೆಳದಿಂಗಳನ್ನು ಹಾಸಿಕೊಳ್ಳುವುದಿಲ್ಲ ! ಬಲು ಇಷ್ಟವಾಯ್ತು ಸಾಲು.